ಪಾದೆಬಂಬಿಲ | 20ನೇ ವಾರ್ಷಿಕ ಭಜನ ಕಾರ್ಯಕ್ರಮ,ಧಾರ್ಮಿಕ ಸಭೆ


Ad Widget

ಸವಣೂರು :ಭಜನೆಯ ಮೂಲಕ ಭಗವಂತನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.ಸಾಮೂಹಿಕ ಆರಾಧನೆಯಿಂದ ಭಗವಂತನ ಅನುಗ್ರಹ ದೊರೆಯಲು ಸಾಧ್ಯ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ  ಸ್ವಾಮೀಜಿ ಹೇಳಿದರು.

ಅವರು ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀದುರ್ಗಾ ಭಜನಾ ಮಂದಿರದ 20ನೇ ವಾರ್ಷಿಕ ಭಜನಾ ಕಾರ್ಯಕ್ರಮ ಮತ್ತು ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ,ಸರ್ಪ ಸಂಸ್ಕಾರ,ಆಶ್ಲೇಷ  ಬಲಿ  ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.


Ad Widget

ಭಜನೆಯಿಂದ ಎಲ್ಲರನ್ನೂ ಒಂದುಗೂಡಿಸಲು ಸಾಧ್ಯ.ಭಜನೆಯ ಮೂಲಕ ವಿಭಜನೆ ನಿಲ್ಲುತ್ತದೆ.ಭಜನ ಮಂದಿರಗಳು,ಪ್ರಾರ್ಥನಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರಬೇಕು.ಆಧುನಿಕತೆಯ ಸೋಗಿನ ಆಡಂಬರದ ಬದುಕಿಗಿಂತ ಸರಳ ಜೀವನ ನಮ್ಮದಾಗಬೇಕು.ಭಜನ ಮಂದಿರಗಳಲ್ಲಿ ವಾರ್ಷಿಕೋತ್ಸವಗಳಿಗೆ ಮಾತ್ರ ಸೀಮಿತವಾಗದೆ ನಿಗದಿತ ದಿನಗಳನ್ನು ಗೊತ್ತುಪಡಿಸಿ ಭಜನೆ,ಸತ್ಸಂಗ,ದೇವತಾ ಪ್ರಾರ್ಥನೆಗಳು ನಿರಂತರವಾಗಿ ನಡೆಯುವಂತಾಗಬೇಕು ಎಂದರು.


Ad Widget

ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ,ಭಜನಾ ಮಂದಿರಗಳಿಂದ ಸಂಸ್ಕಾರದ ಬೋಧನೆಯಾಗಬೇಕು.ಸಂಸ್ಕಾರ,ಸಂಸ್ಕೃತಿಯೇ ಭಾರತದ ಜೀವಾಳ ಎಂದ ಅವರು ಕನ್ನಡಕುಮೇರು-ಪಾದೆಬಂಬಿಲ ಭಜನಾ ಮಂದಿರದ ಸಂಪರ್ಕರಸ್ತೆಯ ಅಭಿವೃದ್ದಿಗೆ  ಶೀಘ್ರದಲ್ಲೆ ಅನುದಾನ ನೀಡಲಾಗುವುದು.ಅಲ್ಲದೆ ಸ್ಥಳೀಯ ಪಂಚೋಡಿ ಕೆರೆ ಅಭಿವೃದ್ದಿಗೆ ಈಗಾಗಲೇ ನೀಲನಕಾಶೆ ಸಿದ್ದವಾಗಿದ್ದು,ಪ್ರಸ್ತಾವನೆ ಕಾರ್ಯರೂಪಕ್ಕೆ ಬರುವ ಹಂತದಲ್ಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ  ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮಾತನಾಡಿ,ಪ್ರಸ್ತುತ ಭಜನೆಗೆ ವಿಶೇಷ ಮಹತ್ವ ಬಂದಿದೆ.ಎಲ್ಲೆಡೆಯೂ ಭಜನ ಸತ್ಸಂಗದ ಪ್ರಭಾವ ಹೆಚ್ಚು ಬೀರಿದೆ.ಮುಂದಿನ ದಿನಗಳಲ್ಲಿ ಸವಣೂರಿನಲ್ಲೂ ಬೃಹತ್ ಭಜನಾ ಕಾರ್ಯಕ್ರಮ ನಡೆಸುವ ಕುರಿತು ಚಿಂತನೆ ಮಾಡಲಾಗಿದೆ.ಭಜನೆಯಿಂದ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದರು.

Ad Widget

Ad Widget

Ad Widget

ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ದನ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ್,ತಾ.ಪಂ.ಸದಸ್ಯೆ ರಾಜೇಶ್ವರಿ  ಕನ್ಯಾಮಂಗಲ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಪ್ರಿತ್ ರೈ ಖಂಡಿಗ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್,ನಾಭಿರಾಜ ಆರಿಗ ಬಂಬಿಲಗುತ್ತು,ಪಾದೆಬಂಬಿಲ ಶ್ರೀದುರ್ಗಾ ಭಜನ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಬಿ.ಕೆ.ರವಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ

ಕಾರ್ಯಕ್ರಮದಲ್ಲಿ  ಭಜನಾ ಮಂಡಳಿಯ ಪೋಷಕ ಸದಸ್ಯರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ್ ರೈ ಸೂಡಿಮುಳ್ಳು,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಯಂತ ವೈ,ರಕ್ತದಾನಿ ರಾಕೇಶ್ ರೈ ಕೆಡೆಂಜಿ,ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ಅವರಿಗೆ ಗೌರವಾರ್ಪಣೆ ಮಾಡಲಾಯಿತು.

ಭಜನ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಅವರು ಪ್ರಸ್ತಾವನೆಗೈದರು.ಅಧ್ಯಕ್ಷ  ಹೊನ್ನಪ್ಪ ಗೌಡ ಜಾರಿಗೆತ್ತಡಿ ಸ್ವಾಗತಿಸಿದರು.ವಾಣಿ ಶ್ರೀ ಎ.ಎಲ್.ವಂದಿಸಿದರು.ಪ್ರವೀಣ್ ಚೆನ್ನಾವರ  ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ  ಬಂಬಿಲ ಕೇಶವ ಕಲ್ಲೂರಾಯ ಅವರ ನೇತೃತ್ವದಲ್ಲಿ  ಗಣಹೋಮ,ಸರ್ಪ ಸಂಸ್ಕಾರ ಆಶ್ಲೇಷ ಬಲಿ,ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಭಜನಾ ಮಂಡಳಿಯ ಕಾರ್ಯದರ್ಶಿ ಪುಟ್ಟಣ್ಣ ಪರಣೆ,ಪದಾಽಕಾರಿಗಳಾದ ಸೋಮಪ್ಪ ಗೌಡ,ಲೋಕಯ್ಯ ಗೌಡ,ವಿಶ್ವನಾಥ ಗೌಡ,ಜಯಾನಂದ ಜಾರಿಗೆತ್ತಡಿ,ವಿಶ್ವನಾಥ ಬಿ.ಜೆ,ಪುಟ್ಟಣ್ಣ ಗೌಡ ಅಂಗಡಿಮೂಲೆ,ಬಾಲಕೃಷ್ಣ ಬಿ.ಕೆ,ನವೀನ್ ಅಂಗಡಿಮೂಲೆ,ಹರಿಪ್ರಸಾದ್ ಅಂಗಡಿಮೂಲೆ,ಚೆನ್ನಪ್ಪ ಗೌಡ ,ಜಯಾನಂದ ಅಂಗಡಿಮೂಲೆ, ಸಚಿನ್,ನಿತಿನ್,ಶರತ್,ವಿಜಯ ಬಿ.ಜೆ,ಹರೀಶ್,ಅವಿನಂದ,ಶಿವ ಪ್ರಸಾದ್,ಮಂಜುನಾಥ ಬಿ.ಕೆ,ಅರುಣ್ ಕುಮಾರ್,ಪ್ರಶಾಂತ್ ಬಿ.ಜೆ,ಜಯಶ್ರೀ ಬಿ.ಕೆ,ರಮೇಶ್ ಪಂಚೋಡಿ,ಮೋಹನ್ ರೈ ಬರೆಮೇಲು,ಅಭಿಷೇಕ್, ನೀತಾ,ವೀಣಾ ಅತಿಥಿಗಳನ್ನು ಗೌರವಿಸಿದರು.

ಸಂಜೆ ನಡೆದ ಭಜನಾ ಕಾರ್ಯಕ್ರಮದಲ್ಲಿ ದೇವಸ್ಯ ಹರಿನಗರ ಶ್ರೀಹರಿಭಜನಾ ಮಂಡಳಿ,ಚಾರ್ವಾಕ ಶ್ರೀಕಪಿಲೇಶ್ವರ ಭಜನಾ ಮಂಡಳಿ,ಪೆರಿಯಡ್ಕ ಆದಿಶಕ್ತಿ ಭಜನಾ ಮಂಡಳಿ,ಕುಮಾರಮಂಗಲ ಕೃಷ್ಣಾರ್ಪಿತ ಭಜನಾ ಮಂಡಳಿ,ಮುಗೇರು ಶ್ರೀ ಮಹಾವಿಷ್ಣುಭಜನಾ ಮಂಡಳಿ,ನರಿಮೊಗರು ಪ್ರಖ್ಯಾತಿ ಭಜನ ಮಂಡಳಿ,ಕಾಣಿಯೂರು ಶ್ರೀಲಕ್ಷ್ಮೀ ನರಸಿಂಹ ಭಜನಾ ಮಂಡಳಿ ,ಪುರುಷರಕಟ್ಟೆ  ಶ್ರೀದೇವಿ ಭಜನಾ ಮಂಡಳಿಯವರು ಪಾಲ್ಗೊಂಡಿದ್ದರು.

ಬಳಿಕ ಸಾರ್ವಜನಿಕ  ಶ್ರೀ ಶನೈಶ್ಚರ ಪೂಜೆ,ಮಹಾಪೂಜೆಯ ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ

ರಾತ್ರಿ ಸ್ಥಳೀಯ ವಿದ್ಯಾರ್ಥಿಗಳಿಂದ ಹಾಗೂ ಕಣ್ವರ್ಷಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ  ಸಾಂಸ್ಕೃತಿಕ ವೈವಿಧ್ಯ , ಕಿಶೋರ್ ಶೆಟ್ಟಿ ನಿರ್ದೇಶನದ ಲಹರಿ ತಂಡದ ತುಳು ಹಾಸ್ಯಮಯ ನಾಟಕ ಪುದರ್ ಬೊಡ್ಚಿ-ಊರು ಬೊಡ್ಚಿ ನಾಟಕ ಪ್ರದರ್ಶನ ನಡೆಯಿತು.

error: Content is protected !!
Scroll to Top
%d bloggers like this: