ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತ್ತಡ್ಕ ನಿಧನ
ಹಾಲು ಹಿಂಡುವ ಯಂತ್ರ ಸಂಶೋಧನೆಯ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ನಿವೃತ್ತ ಶಿಕ್ಷಕ ರಾಘವ ಗೌಡ ಪಲ್ಲತ್ತಡ್ಕ ಮಾ.9ರ ತಡರಾತ್ರಿ 11.20 ಕ್ಕೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಗಲಿದ ರಾಘವ ಗೌಡರ ಅಂತ್ಯ ಸಂಸ್ಕಾರವು ಇಂದು ಪೂರ್ವಾಹ್ನ 11 ಗಂಟೆಯ ವೇಳೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಹಾಲು ಕರೆಯುವ ಯಂತ್ರ ಸೇರಿದಂತೆ ಹಲವು ಆಧುನಿಕ ಆವಿಷ್ಕಾರಗಳನ್ನು ಸಂಶೋಧಿಸಿರುವ ರಾಘವ ಗೌಡರು ಈ ಕಾರ್ಯಕ್ಕೆ ರಾಷ್ಟ್ರಪತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ರಾಷ್ಟ್ರಕ್ಕೆ ಹೆಮ್ಮೆಯಾಗಿದ್ದ ಮಿಲ್ಕ್ ಮಾಸ್ಟರ್
ಹಳ್ಳಿಿಯಲ್ಲಿದ್ದುಕೊಂಡೇ ತನ್ನ ಸಂಶೋಧನೆಯನ್ನು ಜಗದಗಲ ಹರಡಿದ, ಅದನ್ನು ಉದ್ಯಮವಾಗಿ ಬೆಳೆಸಿ ಹೈನುಗಾರಿಕೆಯಲ್ಲಿ ಆಧುನೀಕ ರಣಕ್ಕೂ, ಕೃಷಿಯಲ್ಲಿ ಸರಳೀಕರಣಕ್ಕೂ ಕಾರಣರಾದ ಸಾಧಕ ರಾಘವ ಗೌಡರು.
ಇವರು ದ.ಕ.ದ ಸುಳ್ಯ ತಾಲೂಕಿನವರೇ ಎನ್ನುವುದು ಹೆಮ್ಮೆೆ.ಇವರ ಸಂಶೋಧನೆಗಳು ರಾಷ್ಟ್ರಕ್ಕೆೆ ಹೆಮ್ಮೆೆಯಾಗಿದ್ದರು.
ಹಾಲು ಕರೆಯುವ ಯಂತ್ರವನ್ನು ಸಂಶೋಧಿಸಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಿ ಯನ್ನು ಪಡು ಜೊತೆಗೆ ಇನ್ನಿಿತರ ಹಲವು ಸಂಶೋಧನೆಗಳನ್ನು ನಡೆಸಿದ್ದರು.
ನಿವೃತ್ತ ಶಿಕ್ಷಕ ಪಲ್ಲತ್ತಡ್ಕ ದಿ. ಐತ್ತಪ್ಪ ಗೌಡ ದಿ. ಶಿವಮ್ಮ ದಂಪತಿಯ ಐವರು ಪುತ್ರರಲ್ಲೊೊಬ್ಬರಾದ ರಾಘವ ಗೌಡರು ಕೂಡಾ ಶಿಕ್ಷಕರು.
18 ವರ್ಷ ಶಿಕ್ಷಕ ವೃತ್ತಿಿ ನಡೆಸಿದ ಇವರು ಸ್ವಯಂ ನಿವೃತ್ತಿಿ ಪಡೆದವರು.
ಇವರ ಪತ್ನಿಿ ಶ್ರೀೆಮತಿ ಲೀಲಾವತಿಯವರು ಕೂಡಾ ಶಿಕ್ಷಕರಾಗಿದ್ದು, 4 ವರ್ಷದ ಹಿಂದಷ್ಟೇ ಸ್ವಯಂ ನಿವೃತ್ತಿಿ ಪಡೆದಿದ್ದಾರೆ.
ಇವರು ಪತ್ನಿ ಲೀಲಾವತಿ, ಹಿರಿಯ ಪುತ್ರಿಿ ಶ್ರೀಮತಿ ಮೈನಾ, ಅಳಿಯ ಕುಸುಮಾಧರ ಕೇಪಳಕಜೆ. ಕಿರಿಯ ಪುತ್ರಿಿ ಶ್ರೀಮತಿ ಮಧು, ಅಳಿಯ ಯತೀಶ್ ಪಾಲೋಳಿ ಅವರನ್ನು ಅಗಲಿದ್ದಾರೆ.