ಕುದ್ಮಾರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪಿಗೆ ಜಾಮೀನು

ಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಇದೀಗ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಅಬ್ದುಲ್ಲಾಗೆ 2 ಮದುವೆಯಾಗಿ 6 ಮಕ್ಕಳಿರುವ ಈತ 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು ,ಬಾಲಕಿ ನೀಡಿರುವ ದೂರಿನಂತೆ ಪೊಲೀಸರು ಅಬ್ದುಲ್ಲಾ ಎಂಬಾತನನ್ನು ಫೆ.14ರಂದು ಸಂಜೆ ಬಂಧಿಸಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

ಈ ನಡುವೆ ಫೆ.14 ರಂದು ರಾತ್ರಿ ಕುದ್ಮಾರು ರಸ್ತೆ ಬದಿಯಲ್ಲಿದ್ದ ಆರೋಪಿ ಅಬ್ದುಲ್ಲಾ ನ ಅಂಗಡಿಗೆ ಬೆಂಕಿಹಚ್ಚಿದರಿಂದ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು.

error: Content is protected !!
Scroll to Top
%d bloggers like this: