ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪಾದಯಾತ್ರೆ ಮೂಲಕ ಬಂದ ಭಕ್ತರು
ಪುತ್ತೂರು: ಪುನರುತ್ಥಾನಗೊಂಡ ದೇಯಿಬೈದ್ಯೇತಿ ಮೂಲ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲುಗೆ ಬಂಟ್ವಾಳದಿಂದ ಭಕ್ತರು ಪಾದಯಾತ್ರೆಯ ಮೂಲಕ ಭೇಟಿ ನೀಡಿದರು.
ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಅಮ್ಮುಂಜೆಯಿಂದ ಭಕ್ತಾದಿಗಳು ಪಾದಯಾತ್ರೆಯ ಇವತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲುಗೆ ಆಗಮಿಸಿದರು. ನಿನ್ನೆ ಮುಂಜಾನೆ ಪೊಳಲಿ ಗ್ರಾಮದಿಂದ ಬಿಟ್ಟ ಗ್ರಾಮಸ್ಥರು ಒಟ್ಟು 65 ಕಿಲೋಮೀಟರ್ ಗಳನ್ನು ಕ್ರಮಿಸಿ ಇವತ್ತು ಕೋಟಿ ಚೆನ್ನಯ್ಯ ರ ಕ್ಷೇತ್ರಕ್ಕೆ ಆಗಮಿಸಿದರು.
ಕ್ಷೇತ್ರದ ತಂತ್ರಿಗಳು, ಅರ್ಚಕರುಗಳು ಪಾದಯಾತ್ರಿಗಳನ್ನು ಸ್ವಾಗತಿಸಿದರು. ಬಳಿಕ ಪ್ರಸಾದ ನೀಡಿ ಗೌರವಿಸಲಾಯಿತು.