ಕಡಬದ ಐತ್ತೂರು ಗ್ರಾಮ : ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಸುಮಿತ್ರಾ ಕಣ್ಮರೆ !

ಕಡಬ, ಮಾ.09 : ವಿವಾಹಿತ ಮಹಿಳೆಯೊಬ್ಬಳು ತನ್ನ ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಕಾಣೆಯಾಗಿದ್ದಾಳೆ.
ಕಡಬದ ಐತ್ತೂರು ಗ್ರಾಮದ ಸಿ.ಆರ್.ಸಿ ಕಾಲನಿ ಯ ಮೂವತ್ತು ವರ್ಷದ ಸುಮಿತ್ರಾ ಕಾಣೆಯಾದ ಮಹಿಳೆ.


Ad Widget

Ad Widget

ಇಲ್ಲಿನ ಸಿ.ಆರ್.ಸಿ ಕಾಲನಿ ನಿವಾಸಿ ಕನಕರಾಜ ಎಂಬವರ ಪತ್ನಿಯಾಗಿದ್ದು ಇವರಿಗೆ ಎಂಟು ವರ್ಷದ ಹಿಂದೆ ಮದುವೆಯಾಗಿತ್ತು. ಸುಮಿತ್ರಾ ಕೆಲ ಕಾಲ ಗಂಡನ ಜತೆ ಸಂಸಾರ ಮಾಡಿಕೊಂಡಿದ್ದಳು.


Ad Widget

ಗಂಡ ತಮಿಳುನಾಡಿನವನಾಗಿದ್ದು ಅವರಿಗೆ ಒಂದು ಮಗು ಕೂಡಾ ಆಗಿತ್ತು. ಬಳಿಕ ಅದೇನಾಯಿತೋ, ಆಕೆ ಗಂಡನ ಮನೆಯಿಂದ ತನ್ನ ತವರು ಮನೆಗೆ ಬಂದಿದ್ದಳು.

ಫೆಬ್ರವರಿ 26 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ 5 ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಕಣ್ಮರೆಯಾಗಿದ್ದಾರೆ. ಮನೆಯವರು ಮೊದಲು ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದಾರೆ. ಎಲ್ಲ ಕಡೆಯೂ ಫೋನ್ ಮಾಡಿ ವಿಚಾರಿಸಿದ್ದಾರೆ. ಸುತ್ತ ಮುತ್ತ ಇದ್ದ ಕೆರೆ ಬಾವಿಗಳಿಗೆ ಇಣುಕಿ ನೋಡಿ, ಎಲ್ಲೂ ಸಿಗದ ಕಾರಣ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ.

Ad Widget

Ad Widget

Ad Widget

ಪೋಷಕರ ಲಿಖಿತ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಕಡಬ ಪೊಲೀಸರು ಹುಡುಕಾಟ ಶುರುಮಾಡಿದ್ದಾರೆ.

error: Content is protected !!
Scroll to Top
%d bloggers like this: