ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿಲ್ಲ, ಭಯ ಪಡುವ ಅಗತ್ಯ ಇಲ್ಲ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಜನರು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದರ ಅವರು ಹೊರ ದೇಶದಿಂದ ಆಗಮಿಸಿದ ಪ್ರಯಾಣಿಕನೊಬ್ಬನಲ್ಲಿ ಜ್ವರದ ಲಕ್ಷಣ ಕಂಡುಬಂತು. ಹಾಗಾಗಿ ಸಾರ್ವಜನಿಕ ಆರೋಗ್ಯದ ಹಿತ ದೃಷ್ಠಿಯಿಂದ ಆತನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೆವು. ಆದರೆ ಆತ ಚಿಕಿತ್ಸೆಗೆ ಯಾವುದೇ ಸಹಕರಿಸಲಿಲ್ಲ. ಇದರ ಬಗ್ಗೆ ಯಾರು ಗೊಂದಲಕ್ಕೀಡಾಗಬಾರದು. ಈಗ ಅವರನ್ನು ಪರೀಕ್ಷೆಗೆ ಒಳಪಡಿಸಲು ಮನವರಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಳೆದ ಕೆಲ ದಿನಗಳಿಂದ ಮಂಗಳೂರಿನಲ್ಲಿ, ಕಾರ್ಕಳದಲ್ಲಿ, ಉಡುಪಿಯಲ್ಲಿ ಹೀಗೆ ದಕ್ಷಿಣಕನ್ನಡದ ಹಲವೆಡೆ ಕೋರೋನಾ ವೈರಸ್ ನ ಸೋಂಕಿತರ ಬಗ್ಗೆ ಊಹಾಪೋಹದ ಸುದ್ದಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಹಲವು ಪತ್ರಿಕೆಗಳಲ್ಲಿ ಬರುತ್ತಿದೆ. ಸಾಮಾನ್ಯ ಜ್ವರ ಬಾಧಿತರನ್ನೂ ಕೋರೋನಾ ಸೋಂಕಿತರೆಂಬಂತೆ ಬಿಂಬಿಸುವ ಕಾರ್ಯ ಇನ್ನಾದರೂ ನಿಲ್ಲಬೇಕು. ಕೊರೊನಾ ಬಗ್ಗೆ ಭಯ ಬೇಡವೇ ಬೇಡ. ಮುನ್ನೆಚ್ಚರಿಕೆ ಮತ್ತು ಜಾಗೃತೆ ಸಾಕು.