ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳೆಯರಿಗಾಗಿ ಬೆಳಿಗ್ಗೆ ಬೆಂಕಿ ರಹಿತ ಅಡುಗೆ ಚರುಂಬುರಿ ಸ್ಪರ್ಧೆ ಮತ್ತು ಪ್ರಸ್ತುತಿಯನ್ನು ಏರ್ಪಡಿಸಲಾಯಿತು.ಇದರ ತೀರ್ಪುಗಾರರಾಗಿ ಶ್ರೀ ಕೇಶವ ಪ್ರಸನ್ನ,ಪ್ರಮೋದ್ ಕುಮಾರ್,ಶ್ರೀಮತಿ ಉಷಾ ಕಿರಣ್ ಸಹಕರಿಸಿದರು. ಸಂಜೆ 5.00 ಗಂಟೆಗೆ 1 ಮಿನಿಟ್ ಗೇಮ್ ಏರ್ಪಡಿಸಲಾಯಿತು.

ನಂತರ ಸಭಾ ಕಾರ್ಯಕ್ರಮ ನಡೆಯಿತು.ರಿಕ್ರಿಯೇಷನ್ ಸೆಂಟರಿನ ಉಪಾಧ್ಯಕ್ಷರಾದ ಶ್ರೀಮತಿ ಸುಲತಾ ಸತೀಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶ್ರೀಮತಿ ವಂದನಾ ಶಂಕರ್ ಮತ್ತು ಶ್ರೀಮತಿ ಸಹನಾ ಭವಿನ್ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಪೂರ್ಣಿಮಾ,ಶಶಿಕಲಾ,ವಾಣಿ ಪ್ರಾರ್ಥಿಸಿದರು,ನಂತರ ಶ್ರೀಮತಿ ಶೋಭಾ ನಾಗೇಶ್ ಸ್ವಾಗತಿಸಿದರು.ಶ್ರೀಮತಿ ಕೃತಿಕಾ ರಮೇಶ್ ರೈ ಮತ್ತು ಶ್ರೀಮತಿ ಕವಿತಾ ತೀರ್ಥರಾಮ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು.

ಅತಿಥಿಗಳಿಗೆ ಶ್ರೀಮತಿ ಚಿತ್ರಾ ರಾಜೇಶ್,ಶುಭ ಕೆ.ಸಿ ರಾವ್ ಮತ್ತು ಬಿಂದು ಪ್ರಶಾಂತ್ ಹೂ ಗುಚ್ಛ ನೀಡಿ ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀಮತಿ ಸುಲತಾ ಸತೀಶ್ ರವರು ಮಾತನಾಡಿ ಮಹಿಳೆ ಇಂದು ಎಲ್ಲಾ ರಂಗಗಳಲ್ಲಿ ಪುರುಷರಿಗೆ ಸಮಾನವಾಗಿ ದುಡಿಯುತ್ತಿದ್ದಾರೆ,ಆದರೆ ಈ ಪರಿಸ್ಥಿತಿ ಹಿಂದೆ ಇರಲಿಲ್ಲ,ಬಹುಶ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ದೊರೆತ ಮೇಲಷ್ಟೆ ಅವರು ಸಮಾಜದ ವಿವಿಧ ರಂಗಗಳಲ್ಲಿ ದುಡಿಯಲು ಸಾಧ್ಯವಾಯಿತು.ಹೆಣ್ಣು ಎಂದಿಗೂ ಅಬಲೆಯಲ್ಲ,ಕಿತ್ತೂರು ರಾಣಿ ಚೆನ್ನಮ್ಮ,ವೀರ ವನಿತೆ ಓಬವ್ವ , ಝಾನ್ಸಿರಾಣಿ ಲಕ್ಮೀಭಾಯಿ,ಇವರೆಲ್ಲ ಧೀರ ರಮಣೀಯರಾಗಿದ್ದಾರೆ.ಹಾಗೆಯೇ ಸರಳ ಸಪ್ತಾನ್,ಶೀಲ ದಾವರೆ,ಫಾತಿಮಾ ಬಿ.ವಿ,ಸುಧಾಮೂರ್ತಿ ಮತ್ತು ಸಾಲುಮರದ ತಿಮ್ಮಕ್ಕ ಇವರೆಲ್ಲರ ಸಾಧನೆಯನ್ನು ಸ್ಮರಿಸಿದರು.

ಮುಖ್ಯ ಅತಿಥಿಗಳಾದ ಶ್ರೀಮತಿ ಸಹನಾ ಭವಿನ್ ಇವರು ಮಾತನಾಡಿ, ನಾನು ಕೂಡ ಮಹಿಳಾ ಸೇವಾ ಸಂಸ್ಥೆಯಾದ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆಯಾಗಿದ್ದೇನೆ.ಮಾರ್ಚ್ 8 ನೇ ತಾರೀಕನ್ನು ನಾವು ಮಹಿಳಾ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ,ಆದರೆ ಇದನ್ನು ನಾವು ಕೇವಲ ಒಂದು ದಿವಸವನ್ನಾಗಿ ಇಡದೇ ವರ್ಷದ ಪ್ರತಿದಿನ ಮಹಿಳೆಯರಿಗೆ ಗೌರವವನ್ನು ನೀಡಬೇಕು.ಇನ್ನರ್ ವೀಲ್ ಸಂಸ್ಥೆ ಸಮಾಜ ಸೇವೆ ಮಾಡುವ ಇಂಟರ್ ನ್ಯಾಷನಲ್ ಮಹಿಳಾ ಸಂಸ್ಥೆ,,ಇನ್ನರ್ ವೀಲ್ ಸಂಸ್ಥೆಯ ಮೂಲಕ ಈ ವರ್ಷ 88 ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ.ಸ್ವರಕ್ಷಾ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಆಗುವ ತೊಂದರೆಗಳಿಗೆ ತನ್ನ ಆತ್ಮ ರಕ್ಷಣೆ ಹೇಗೆ ಮಾಡಬೇಕು ಎಂಬುದಾಗಿ ಪ್ರತೀ ಶಾಲೆಯಲ್ಲಿ ತಿಳಿಯಪಜಿಸುತ್ತಾ ಬಂದಿದ್ದೇವೆ.ಮಹಳೆಯರು ಮಕ್ಕಳಿಗೆ ತಮ್ಮ ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ಹೇಗೆ ಗೌರವಿಸಬೇಕು ಎಂದು ತಿಳಿಯಪಡಿಸಬೇಕು.ಮೊಬೈಲನ್ನು ಬಿಟ್ಟು ಹೆಚ್ಚು ಹೊತ್ತು ಮಕ್ಕಳ ಜೊತೆ ಕಾಲಕಳೆಯ ಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಶ್ರೀಮತಿ ವಂದನಾ ಶಂಕರ್ ಮಾತನಾಡಿ ತನ್ನ ಬಾಲ್ಯದ ಜೀವನವನ್ನು ನೆನಪಿಸಿದರು,ಮನೆಯ ಒಲೆ ಯಾವತ್ತೂ ಉರಿಯುತ್ತಿರಬೇಕು,ಸ್ವಗ್ಗಿ,ಜೋಮೇಟೋ ಯಾವುದೇ ಬರಲಿ ಮನೆಯ ಒಲೆ ಉರಿಯುತ್ತಿರಬೇಕು ಅದೇ ನಮ್ಮ ರುಚಿ.ಮನೆ ಎಷ್ಟೇ ದೊಡ್ಜದಿರಲಿ,ಚಿಕ್ಕದಿರಲಿ ಖುಷಿಯಲ್ಲಿರಬೇಕು.ನಾವು ಎಷ್ಟೇ ಮುಂದುವರಿದರೂ ನಮ್ಮ ಸಂಸ್ಕ್ರತಿಯನ್ನು ಮರೆಯಬಾರದು.ನಮ್ಮ ಮನೆಯ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಳಿಸಿಕೊಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಚರುಂಬುರಿ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶುಭ ಕೆ.ಸಿ ರಾವ್,ದ್ವಿತೀಯ ಬಹುಮಾನ ಪಡೆದ ಪುಷ್ಪ ಮತ್ತು ಬಿಂದು ಪ್ರಶಾಂತ್ ಹಾಗೂ … ಬಹುಮಾನ ಪಡೆದ ಮಂಜುಳ ಹಾಗೆಯೇ 1ಮಿನಿಟ್ ಗೇಮ್ ನಲ್ಲಿ ವಿಜೇತರಾದ ಉಷಾಕಿರಣ್,ಮಂಜುಳ,ವಾಣಿಪ್ರಶಾಂತ್,ವೀಣಾ ಕುಮಾರಿ,ಹೇಮಾ ಮಹೇಶ್,ವಿದ್ಯಾ ಇವರಿಗೆ ಬಹುಮಾನವನ್ನು ಶ್ರೀಮತಿ ವಂದನಾ ಶಂಕರ್,ಶ್ರೀಮತಿ ಸಹನಾ ಭವಿನ್ ನೀಡಿದರು.ಮುಖ್ಯ ಅತಿಥಿಗಳಿಗೆ ಸ್ಮರಣಿಕೆಯನ್ನು ಸುಲತ ನೀಡಿದರು. ಧನ್ಯವಾದ ಸಮರ್ಪಣೆಯನ್ನು ಶ್ರೀಮತಿ ಶ್ವೇತಾ ಶಿವರಾಮ್ ನೀಡಿದರು,ಕಾರ್ಯಕ್ರಮದ ನಿರೂಪಣೆಯನ್ನು ಶಾಂತಿ ಹೊಳ್ಳ ಇವರು ನೆರವೇರಿಸಿದರು.

Leave A Reply

Your email address will not be published.