ಬಲ್ಯ ಸ್ಪೋಟಕ ತಿಂದು ದನ ಸಾವು | ಆರೋಪಿ ಪತ್ತೆಗೆ ಮೂರು ದಿನ ಗಡುವು- ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ

 

ಕಡಬ: ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿ ಸ್ಪೋಟಕ ವಸ್ತು ಜಗಿದು ಗೋವು ಸಾವನಪ್ಪಿದ ಪ್ರಕರಣದ ಆರೋಪಿಗಳನ್ನು ಮೂರು ದಿನದೊಳಗಡೆ ಬಂದಿಸದಿದಲ್ಲಿ ಹಿಂದೂ ಬಾಂದವರು ಒಟ್ಟಾಗಿ ಕಡಬದಲ್ಲಿ ತೀವೃ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದರು.

ಗೋವು ಸಾವನಪ್ಪಲು ಕಾರಣವಾದ ಸ್ಪೋಟಕವಿಟ್ಟ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಕಡಬ ಅರಕ್ಷಕರ ಮತ್ತು ಅರಣ್ಯ ಇಲಾಖೆ ವೈಪಲ್ಯ ಖಂಡಿಸಿ ಕಡಬದ ಮುಖ್ಯ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಡಬ ಪ್ರಖಂಡ ಭಾನುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು. ಸಮಸ್ತ ಹಿಂದೂಗಳ ಆರಾದ್ಯ ಮೂರ್ತಿ ಗೋವು ಸಾವಿನ ಬಗ್ಗೆ ಮರುಕವ್ಯಕ್ತವಾಗುತ್ತಿದೆ. ಗೋವನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಅನ್ಯಾಯವಾಗಿದೆ. ಪ್ರಕರಣ ನಡೆದು 21 ದಿನಗಳಾದರೂ ನಿಶ್ಚಿತ ಆರೋಪಿಗೆ ಶಿಕ್ಷಕಿಸುವಲ್ಲಿ ಸಂಬಂದಪಟ್ಟ ಇಲಾಖೆ ವಿಫಲವಾಗಿದೆ. ಅಪರಾದ ತಡೆಯುವ ಇಲಾಖೆಯನ್ನು ಕಾಣದ ಶಕ್ತಿಗಳು ಕಟ್ಟಿ ಹಾಕುತ್ತಿದೆ. ಇಂತಹ ನೀಚ ರಾಜಕೀಯದಿಂದ ಸಮಾಜದಲ್ಲಿ ಸಾಮರಸ್ಯ ಕೆಡುತ್ತಿದೆ. ಮೂರು ದಿನದೊಳಗೆ ಆರೋಪಿ ಬಂದನವಾಗದಿದಲ್ಲಿ ಹಿಂದೂ ಸಮಾಜೋತ್ಸವದಂತಹ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಪಶು ಅಥವಾ ಕಂದಾಯ ಇಲಾಖೆ ಗೋವು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ವಿಹಂಪ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಶೆಟ್ಟಿ ಮಾತನಾಡಿ, ಕಡಬ ಠಾಣೆಯಿಂದ ಸಾಮನ್ಯ ವ್ಯಕ್ತಿಗಳು ನ್ಯಾಯ ಸಿಗಬೇಕಾದರೆ ಬೀದಿಗಳಿದು ಹೋರಟ ಮಾಡುವ ಅನಿವಾರ್ಯತೆ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಕಡಬ ವ್ಯಾಪ್ತಿಯಲ್ಲಿ ಘಟಿಸಿದ ಹಲವು ಪ್ರಕರಣಗಳು ಬೇದಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಕಡಬದಲ್ಲಿ ಅನ್ಯಾಯವನ್ನು ಬೆಳೆಸುವಲ್ಲಿ ಪಟ್ಟಭದ್ರ ಹಿತಾಶಕ್ತಿಗಳ ಕೈವಾಡವಿದೆ. ಪೊಲೀಸರು ತನ್ನ ಕಾರ್ಯವನ್ನು ನಿಷ್ಟೆಯಿಂದ ಮಾಡುಲು ಇಂತಹ ಶಕ್ತಿಗಳು ಬಿಡುತ್ತಿಲ್ಲ.

ತಕ್ಷಣ ಗೋವು ಸಾವಿಗೆ ಕಾರಣವಾದ ಅರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ವಿಹಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ , ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ , ಬಜರಂಗದಳ ಸಂಚಾಲಕ ಮೂಲಚಂದ್ರ ಕಾಂಚಾಣ , ಜಿಲ್ಲಾ ಗೋ ರಕ್ಷಕ ಪ್ರಮುಖ್ ಮಹೇಶ್ ಬಜತ್ತೂರು , ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ , ಸಂತೋಷ್ ಸುವರ್ಣ ಕೊಡಿಬೈಲ್ , ಸುರೇಶ್ ಕೋಟೆಗುಡ್ಡೆ , ಪ್ರಕಾಶ್ ಎನ್ ಕೆ , ಕಿಶನ್ ಕುಮಾರ್ ರೈ ಪೆರಿಯಡ್ಕ , ವಾಸುದೇವ ಗೌಡ ಕೊಲ್ಲೆಸಾಗು, ಜಯರಾಮ ಗೌಡ ಪಡೆಜ್ಜಾರು, ರಘುರಾಮ ಕುಕ್ಕರೆಬೆಟ್ಟು, ವಿಹಂಪ ಕಡಬ ಪ್ರಖಂಡ ಗೌರವಾಧ್ಯಕ್ಷ ಜನಾರ್ದನ ರಾವ್ ಪ್ರಸ್ತಾವಿಸಿ ,ಸ್ವಾಗತಿಸಿದರು. ಉಮೇಶ್ ಶೆಟ್ಟಿ ಸಾಯಿರಾಂ ವಂದಿಸಿ, ನಿರೂಪಿಸಿದರು. ಗೋವು ದಾನ ವಿಹಂಪ , ಬಜರಂಗದಳ ಕಡಬ ಪ್ರಖಂಡ ವತಿಯಿಂದ ಗೋವು ಕಳೆದುಕೊಂಡ ಬಾಲಚಂದ್ರ ಕುಟುಂಬಕ್ಕೆ ಪ್ರತಿಭಟನೆ ಸಂದರ್ಭ ಗೋವು ದಾನ ಮಾಡಲಾಯಿತು. ಗೋವಿಗೆ ಆರತಿ ಬೆಳಗಿ ಪೂಜಿಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಗೋವಿಗೆ ಆರತಿ ಬೆಳಗಿ ಪೂಜಿಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ವಿಹಂಪ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಶೆಟ್ಟಿ, ವಿಹಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ , ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ , ಬಜರಂಗದಳ ಸಂಚಾಲಕ ಮೂಲಚಂದ್ರ ಕಾಂಚಾಣ , ಜಿಲ್ಲಾ ಗೋ ರಕ್ಷಕ ಪ್ರಮುಖ್ ಮಹೇಶ್ ಬಜತ್ತೂರು , ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ ಮೊದಲಾದವರು ಇದ್ದರು.

Leave A Reply

Your email address will not be published.