” ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದರೂ ನಾನು ಶಾಸಕ ” । ವಿದ್ಯಾರ್ಥಿ, ಪೋಷಕರಿಗೆ ಸ್ಫೂರ್ತಿ ತುಂಬಿದ ಹರೀಶ್ ಪೂಂಜಾ !

ನಿನ್ನೆ ದ್ವಿತೀಯ ಪಿ ಯು ಸಿ ಪರೀಕ್ಷೆಯಲ್ಲಿ ಕಡಿಮೆ ಮಾರ್ಕು ಬರಬಹುದೆಂಬ ಆತಂಕದಲ್ಲಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. ಆ ಘಟನೆಗೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.

 

ಪ್ರಥಮ ಪಿ ಯು ಸಿ ಪರೀಕ್ಷೆಯಲ್ಲಿ ಫೇಲ್ ಆದವ ನಾನು. ನಿನ್ನೆಯ ವಿದ್ಯಾರ್ಥಿಯ ಆತ್ಮಹತ್ಯೆಯ ಪತ್ರಿಕಾ ವರದಿಯನ್ನು ಓದಿದ ಮೇಲೆ ಈ ಮಾತನ್ನು ನಾನು ಅಗತ್ಯವಾಗಿ ಹೇಳಲೇಬೇಕಾಗಿದೆ ಎನ್ನಿಸಿತು. ನಾನು ಅಂದು ಪರೀಕ್ಷೆ ಫೇಲ್ ಆದರೂ ನನ್ನ ಇತರ ಸ್ಕಿಲ್ ಗಳು ಉಪಯೋಗಕ್ಕೆ ಬಂದವು. ಅದರಿಂದ ನಾನು ಬದುಕು ಕಟ್ಟಿಕೊಂಡು ಇವತ್ತು ಬೆಳ್ತಂಗಡಿಯ ನಿಮ್ಮಪ್ರತಿನಿಧಿಯಾಗಿ ನಿಂತಿದ್ದೇನೆ. ಪರೀಕ್ಷೆಗಳು, ಈ ಅಂಕಗಳೇ ಜೀವನದ ಅಂತ್ಯವಲ್ಲ ಎಂಬುದನ್ನು ಪೋಷಕರು ಮತ್ತು ಶಿಕ್ಷಕರು ಅರ್ಥಮಾಡಿಕೊಂಡು ಅದನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕಿದೆ. ಮಕ್ಕಳ ಒತ್ತಡವನ್ನು ಕಮ್ಮಿ ಮಾಡಬೇಕಿದೆ. ಅವರನ್ನು ಅನವಶ್ಯಕ ಒತ್ತಡಗಳಿಗೆ ಹೇರಬೇಡಿ. ಶಾಲೆ, ಪಾಠ, ಪರೀಕ್ಷೆಗಳ ಜತೆಗೇನೇ ಬದುಕಿನ ಇತರ ಆಯಾಮಗಳಲ್ಲಿ ಬದುಕು ಕಟ್ಟಿಕೊಂಡು ಸಕ್ಸಸ್ ಆದವರ ಉದಾಹರಣೆಗಳನ್ನು ನಾವು ಅವರಿಗೆ ಕೊಡಬೇಕಿದೆ. ಮಕ್ಕಳನ್ನು ಈ ದೇಶದ ಶಕ್ತಿಯನ್ನಾಗಿಸೋಣ.

ಹೀಗೆಂದು ಹರೀಶ್ ಪೂಂಜಾ ಅವರು ತಮ್ಮಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ತನ್ನ ಜೀವನದ ನೆಗೆಟಿವ್ ಅಂಶವೊಂದನ್ನು- ತಾನು ಫೇಲ್ ಆದುದನ್ನು- ಹೆಕ್ಕಿ ತೆಗೆದು ಎಲ್ಲರಿಗೂ ತಿಳಿಸಿ, ಪರೀಕ್ಷೆಯ ಸೋಲೇ ಅಂತಿಮವಲ್ಲ ಎಂದು ಮಕ್ಕಳಿಗೆ ಮತ್ತು ಶಿಕ್ಷಕ-ಪೋಷಕರಿಗೆ ಸ್ಫೂರ್ತಿ ತುಂಬುವಂತಹಾ ಕೆಲಸ ಮಾಡಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ. ಅದಕ್ಕಾಗಿ ನಿಮಗೆ ಅಭಿನಂದನೆಗಳು ಸಲ್ಲುತ್ತವೆ.

Leave A Reply

Your email address will not be published.