ಬೆಂಗಳೂರಿನಲ್ಲಿ ತ್ಯಾಜ್ಯ ರಾಶಿಯಲ್ಲಿ ಸ್ಫೋಟ | ಎಡಗಾಲು ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್

ಬೆಂಗಳೂರು, ಮಾ.8: ಬೆಂಗಳೂರಿನ ಆಡುಗೋಡಿಯ ಬಳಿ ಸಂಭವಿಸಿದ ಸ್ಫೋಟಕ್ಕೆ ವ್ಯಕ್ತಿಯೊಬ್ಬರ ಎಡಗಾಲು ತುಂಡಾದ ಘಟನೆ ರಂಗದಾಸಪ್ಪ ಬಡವಾಣೆಯಲ್ಲಿ ವರದಿಯಾಗಿದೆ. ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಹಾಸ್ಟೆಲ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ನರಸಿಂಹಯ್ಯ(60) ಎಂದು ಗುರುತಿಸಲಾಗಿದೆ.

 

ಸ್ಫೋಟವು ತ್ಯಾಜ್ಯ ದ ರಾಶಿಯ ನಡುವೆ ನಡೆದಿದ್ದು ಸಹಜವಾಗಿ ಸ್ಫೋಟವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ರಂಗದಾಸಪ್ಪ ಬಡವಾಣೆಯಲ್ಲಿ ಸಾಲು ಸಾಲು ಗ್ರಾನೈಟ್ ಕಂಪನಿಗಳಿವೆ. ಕಂಪನಿಗಳ ತ್ರಾಜ್ಯ ವಸ್ತುಗಳು ಬೇರೆ ತ್ಯಾಜ್ಯಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಬೆಂಕಿ ಹತ್ತಿಕೊಳ್ಳುವುದು ಅಥವಾ ಸ್ಫೋಟ ಸಂಭವಿಸುತ್ತದೆ. ಇಂತಹುದೇ ಯಾವುದೋ ಕೆಮಿಕಲ್ ಆ ಜಾಗದಲ್ಲಿ ಎಸೆದಿದ್ದು, ಕೆಮಿಕಲ್ ರಿಯಾಕ್ಷನ್‌ನ ಪರಿಣಾಮ ಈ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ.

ಘಟನೆಯಲ್ಲಿ ಎಡಗಾಲು ಛಿದ್ರಗೊಂಡ ನರಸಿಂಹಯ್ಯ ನಿನ್ನೆ, ಭಾನುವಾರ ಸಂಜೆ ಕೆಲಸ ಮುಗಿಸಿಕೊಂಡು ಕಂಠಮಟ್ಟ ಎಣ್ಣೆ ಸೇವಿಸಿಕೊಂಡು ಅದ ಅಮಲಿನಲ್ಲಿ ಅದೇ ಕಸದ ರಾಶಿ ಯ ಮೇಲೆ ಕೂತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆವಾಗ ಕೆಮಿಕಲ್ ನ ಡಬ್ಬ ಒಡೆದು ಸ್ಫೋಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.