ಕುಕ್ಕೆ ಸುಬ್ರಹ್ಮಣ್ಯಕ್ಕೆ ‘ಮಂಗ್ಳೂರು ಮರ್ಮಾಯೆ’ ಟೀಮ್ ಇಂಡಿಯಾದ ಆಟಗಾರ ಮನೀಶ್ ಪಾಂಡೆ ಪತ್ನಿ ಸಮೇತ ಭೇಟಿ

ಇತ್ತೀಚೆಗಷ್ಟೇ ಮದುವೆಯಾಗಿದ್ದ ಮಂಗ್ಳೂರು ಮರ್ಮಾಯೆ, ಟೀಮ್ ಇಂಡಿಯಾದ ಆಟಗಾರ ಮತ್ತು ಕರ್ನಾಟಕದ ಏಕದಿನ ತಂಡದ ನಾಯಕ ಮನೀಶ್ ಪಾಂಡೆ ಸಪತ್ನಿ, ಸಪರಿವಾರ ಸಮೇತ ಶ್ರೀಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

 

ಮಂಗಳೂರು ಮೂಲದ, ಮುಂಬೈ ವಾಸಿ ಆಶಿತಾ ಶೆಟ್ಟಿಯವರನ್ನು ಕೆಲ ತಿಂಗಳ ಹಿಂದೆ ಅವರು ಮದುವೆಯಾಗಿದ್ದರು.

ಇಂದು ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಅವರು ಸುಬ್ರಹ್ಮಣ್ಯ ದೇವರ ದರ್ಶನ ಮಾಡಿದರು ಅಲ್ಲದೆ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿದರು. ಸುಬ್ರಹ್ಮಣ್ಯ ದೇವರ ಸಮ್ಮುಖದಲ್ಲಿ ಅವರು ಆಶ್ಲೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಬಾಲಿವುಡ್ ನ ಹತ್ತುಹಲವು ಸ್ಟಾರ್ ನಟ ನಟಿಯರು, ನಿರ್ಮಾಪಕ-ನಿರ್ದೇಶಕರು ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ನಾಗ ದೋಷ ನಿವಾರಣೆಗಾಗಿ ಮತ್ತು ಆಯುರಾರೋಗ್ಯ ಸಂಪತ್ತಿಗಾಗಿ ಹಲವು ದಶಕಗಳಿಂದ ಆರೋಗ್ಯಾಧಿಪತಿಯಾದ ಸುಬ್ರಹ್ಮಣ್ಯದಲ್ಲಿ ಪ್ರಾರ್ಥಿಸಿಕೊಂಡು ಬರುತ್ತಿದ್ದಾರೆ.

Leave A Reply

Your email address will not be published.