ಗೋವಾ-ಯಶವಂತಪುರ ಹೊಸ ರೈಲಿಗೆ ಕಾಣಿಯೂರಿನಲ್ಲಿ ನಿಲುಗಡೆ | ಮಾ.7ರ ರಾತ್ರಿ ಸ್ವಾಗತ ಕಾರ್ಯಕ್ರಮ
ಕಾಣಿಯೂರು: ಕರಾವಳಿ ಕರ್ನಾಟಕದ ಜನತೆಯ ದಶಕಗಳ ಬೇಡಿಕೆಯಾದ ಮಂಗಳೂರು ಪಡೀಲ್ ರೈಲ್ವೇ ಜಂಕ್ಷನ್ ಮೂಲಕ ಹಾದು ಹೋಗುವ ಯಶವಂತಪುರ- ವಾಸ್ಕೋ ಗೋವಾ ವಿಶೇಷ ಎಕ್ಸ್ ಪ್ರೆಸ್ ರೈಲು ಇದೇ ಮಾರ್ಚ್ 7 ರಂದು ಬೆಂಗಳೂರಿನಿಂದ ಸಂಜೆ 6 ಗಂಟೆಗೆ ಹೊರಡಲಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರ ಮನವಿ ಮೇರೆಗೆ ರೈಲ್ವೇ ರಾಜ್ಯಸಚಿವರಾದ ಸುರೇಶ್ ಅಂಗಡಿಯವರು ಈ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಗೋವಾ-ಯಶವಂತಪುರ ರೈಲಿಗೆ ಕಾಣಿಯೂರಲ್ಲಿ ನಿಲುಗಡೆ
ಸಂಸದೆ ಶೋಭಾ ಕರಂದ್ಲಾಜೆಯವರ ಸತತ ಪ್ರಯತ್ನದಿಂದ ಕಾಣಿಯೂರಿನಲ್ಲಿ ಹೊಸ ರೈಲಿಗೆ ನಿಲುಗಡೆ ನೀಡಲಾಗಿದೆ.
ಇದರಿಂದಾಗಿ ಈ ಭಾಗದ ಜನರ ದಶಕದ ಬೇಡಿಕೆ ಈಡೇರಿದಂತಾಗಿದ್ದು,ಇನ್ನು ಮುಂದೆ ಇತರ ಎಕ್ಸ್‌ಪ್ರೆಸ್ ರೈಲುಗಳೂ ಇಲ್ಲಿ ನಿಲ್ಲುವ ನಿರೀಕ್ಷೆ ಗರಿಗೆದರಿದೆ
ಅಲ್ಲದೇ ಲೋಕಲ್ ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಬೆಳಿಗ್ಗೆ ಹೊರಡುವ ಬಗ್ಗೆಯೂ ನಿರೀಕ್ಷೆ ಹುಟ್ಟಿದೆ.ಈ ಹಿಂದೆ ಮೀಟರ್ ಗೇಜ್ ಹಳಿ ಇರುವ ಸಮಯದಲ್ಲಿ ರಾತ್ರಿ ಕಾಣಿಯೂರಲ್ಲಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಇತ್ತು.
ಈಗ ಹೊಸ ರೈಲಿನ ಹೊಸ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಶನಿವಾರ ಮದ್ಯರಾತ್ರಿ 1.30 ಕ್ಕೆ ಕಾಣಿಯೂರು ರೈಲು ನಿಲ್ದಾಣದಲ್ಲಿ ಹೊಸ ರೈಲಿನ್ನು ಸ್ವಾಗತಿಸಲಾಗುವುದು ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಗಣೇಶ್ ಉದುನಡ್ಕ ತಿಳಿಸಿದ್ದಾರೆ.