ಶಿಶಿಲದ ಮುಚ್ಚಿರಡ್ಕ ಎಂಬಲ್ಲಿ ಕಪಿಲಾ ನದಿಗೆ ಈಜಲು ಹೋದ ಸುಹಾಸ್ ನೀರುಪಾಲು
ಶಿಶಿಲದ ಮುಚ್ಚಿರಡ್ಕ ಎಂಬಲ್ಲಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ಶಿಶಿಲದ ಕಪಿಲಾ ನದಿಯಲ್ಲಿ ತನ್ನ ಗೆಳೆಯನ ಜೊತೆ ಈಜಲು ಹೋಗಿದ್ದ ಸುಹಾಸ್.
19 ವರ್ಷ ವಯಸ್ಸಿನ ಈತನಿಗೆ ಈಜು ಚೆನ್ನಾಗಿ ಬರುತ್ತಿತ್ತು. ಅಂತೆಯೇ ಈಜುತ್ತಾ ಈಜುತ್ತಾ ಎರಡು ಸಲ ಮುಳುಗೆದ್ದಿದ್ದಾನೆ. ಸ್ವಲ್ಪಹೊತ್ತಿನಲ್ಲೇ ದೊಡ್ಡ ಕೂಗು ಹಾಕಿ ಸಹಾಯ ಯಾಚಿಸಿದ್ದಾನೆ.
ದಡದಲ್ಲಿ ಇರುವವರು ಸಹಾಯಕ್ಕೆ ಬರುವಷ್ಟರಲ್ಲಿ ಆತ ನೀರಿನಲ್ಲಿ ಮುಳುಗಿ ಹೋಗಿದ್ದಾನೆ.
ಅದು ಅಂತಹ ದೊಡ್ಡ ನೀರು ಹರಿವಿನ ಪ್ರದೇಶವಲ್ಲ. ದೊಡ್ಡ ಕಾಯವೂ ಅದಲ್ಲ. ಮೇಲಾಗಿ ಆತನಿಗೆ ಈಜು ಬರುತ್ತಿತ್ತು. ಆದರೂ ದುರದೃಷ್ಟವಶಾತ್ ಆತ ನದಿಯ ಸೆಳೆತಕ್ಕೆ ಸಿಕ್ಕಿ ಬಿಟ್ಟಿದ್ದಾನೆ.
ಮೃತ ಸುಹಾಸ್ ಶಿಶಿಲ ಪೇಟೆಯ ನಿವಾಸಿ ಕೊರಗು ಮೊಗೇರ ಎಂಬುವವರ ಪುತ್ರ.
ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಮತ ದೇಹವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಬಿಸಿಲಿನ ಧವ ಏರುತ್ತಿದ್ದಂತೆ ಹುಡುಗರು ನೀರಿನಲ್ಲಿ ಈಜಲು ಸ್ನಾನ ಮಾಡಲು ಹೆಚ್ಚು-ಹೆಚ್ಚು ಹೋಗುತ್ತಿದ್ದಾರೆ. ಕನಿಷ್ಠ ವಾರಕ್ಕೊಂದು ನದಿ ದುರಂತ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪೋಷಕರ ಕಟ್ಟೆಚ್ಚರ ಅತ್ಯಗತ್ಯ.