ಶ್ರೀರಾಮುಲು ಮಗಳ ಮದುವೆ : ರಾಜರ ಮದುವೆಯಲ್ಲಿ ಇತ್ತು ಸಾಮಾನ್ಯರಿಗೂ ಆಹ್ವಾನ !!

ಬೆಂಗಳೂರು : ಅರಮನೆ ನಗರಿ ಬೆಂಗಳೂರಿನಲ್ಲಿನ ಅರಮನೆ ಮೈದಾನದಲ್ಲಿ ಮತ್ತೊಬ್ಬ ರಾಜ ಪುತ್ರಿಯ ಮದುವೆಯು ವಿಜ್ರಂಭಣೆಯಿಂದ ನಡೆದಿದೆ.


Ad Widget

Ad Widget

ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಅವರು ದೇಗುಲಗಳ ಮಾದರಿಯಲ್ಲಿ ನಿರ್ಮಿಸಲಾದ ಸೆಟ್ ನಲ್ಲಿ ಲಲಿತ್ ಸಂಜೀವ್ ರೆಡ್ಡಿ ಅವರ ಕೈ ಹಿಡಿದು ಸಪ್ತಪದಿ ತುಳಿದರು.


Ad Widget

Ad Widget

Ad Widget

Ad Widget

ರಕ್ಷಿತಾ ಅವರ ವಿವಾಹ ಸಮಾರಂಭಕ್ಕಾಗಿ 40 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ತಿರುಪತಿ ತಿಮ್ಮಪ್ಪ ಮತ್ತು ಹಂಪಿ ವಿರೂಪಾಕ್ಷ  ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. 40 ಎಕರೆಯಲ್ಲಿ 27 ಎಕರೆ ಮದುವೆ ಸೆಟ್, 4 ಎಕರೆ ಮದುವೆ ಕಾರ್ಯಕ್ಕೆ, 15 ಎಕರೆ ಜಾಗ ಪಾರ್ಕಿಂಗ್ ಗೆ ಮತ್ತು 6 ಎಕರೆ ಊಟಕ್ಕಾಗಿ ಸೆಟ್ ನಿರ್ಮಾಣಗೊಂಡಿದೆ. ಮುಹೂರ್ತ ಮಂಟಪದಲ್ಲಿ ನಾಲ್ಕೂವರೆ ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು, ಏಳು ಸಾವಿರಕ್ಕೂ ಜಾಸ್ತಿ ಮಂದಿ ಒಂದೇ ಬಾರಿ ಊಟ ಸವಿಯಬಹುದಾಗಿದೆ. ಮದುವೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದು ವಧು-ವರರಿಗೆ ಶುಭಕೋರಿದ್ದಾರೆ.

ಕರ್ನಾಟಕದ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ, ಸರ್ಕಾರದ ಮಂತ್ರಿಗಳು ಶಾಸಕರುಗಳು ಜಿಲ್ಲಾ ತಾಲೂಕು ಮಟ್ಟದ ನಾಯಕರುಗಳು ಕೂಡ ಪಕ್ಷಾತೀತವಾಗಿ ಭಾಗವಹಿಸಿದ್ದರು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಮದುವೆ ಸಂದರ್ಭದಲ್ಲಿ ಮೇಕಪ್ ಮಾಡಿದವರೇ ರಕ್ಷಿತಾಗೆ ಮೇಕಪ್ ಮಾಡಿದ್ದಾರೆ. ಉದ್ಯಮಿ ಅಂಬಾನಿ ಮಗನ ಮದುವೆ ಫೋಟೋ ಮತ್ತು ವಿಡಿಯೋ ತೆಗೆದ ಜಯರಾಮನ್ ಪಿಳ್ಳೈ ಜೊತೆ ದಿಲೀಪ್ ಎನ್ನುವವರು ಶ್ರೀರಾಮುಲು ಪುತ್ರಿಯ ಮುದುವೆ ಫುಲ್ ಫೋಟೋ ವಿಡಿಯೋ ಚಿತ್ರೀಕರಿಸಿದ್ದಾರೆ.

ಜನಾರ್ದನ ರೆಡ್ಡಿ-ಶ್ರಿ ರಾಮುಲು

ಊಟಕ್ಕೆ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಚಪಾತಿ, ಚಟ್ನಿ, ಎರಡು ರೀತಿ ಪಲ್ಯ, ಮೈಸೂರು ಪಾಕ್ ರೀತಿಯ ಫ್ರೂಟ್ ಸ್ವೀಟ್, ಬಾದ್ ಷಾ, ಪಲಾವ್, ಮೊಸರು ಬಜ್ಜಿ, ಮಿರ್ಚಿ, ಉಪ್ಪಿನ ಕಾಯಿ, ಮಜ್ಜಿಗೆ, ಐಸ್ ಕ್ರೀಂ ಹಾಗೂ ಇನ್ನೂ ಕೆಲವು ವಿಶಿಷ್ಟ ತಿನಿಸುಗಳು ಅತಿಥಿ ಅಭ್ಯಾಗತರ ಬಾಯಿ ಚಪಲ ತೀರಿಸಿವೆ.

ಆಗಮಿಸಿದ ಬಂಧುಗಳ ಬೀಳ್ಕೊಟ್ಟ ರಾಮುಲು

ವಿಶೇಷವೆಂದರೆ ಅತಿ ಸಾಮಾನ್ಯ ಕಾರ್ಯಕರ್ತರಿಗೂ ರಾಮುಲು ಅವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರ ಕಳುಹಿಸಿದ್ದರು.

ಆಮಂತ್ರಣ

ರಾಮುಲುವರು ಈ ಹಿಂದೆ ತಾವು ಹಲವು ಸಂದರ್ಭಗಳಲ್ಲಿ ಪರಿಚಯಿಸಿಕೊಂಡು ಸಂಗ್ರಹಿಸಿದ್ದ ವಿಳಾಸದ ಕಾರ್ಯಕರ್ತರಿಗೆ ಮಗಳ ಮದುವೆಯ ಕರೆಯೋಲೆಯನ್ನು ಮರೆಯದೆ ಕಳಿಸಿದ್ದರು. ರಾಮುಲುರವರ ಈ ಗೆಶ್ಚರ್ ಗೆ ಖುಷಿಗೊಂಡ ಸಾಮಾನ್ಯ ಕಾರ್ಯಕರ್ತರುಗಳು ರಾಜ್ಯದ ಮೂಲೆ ಮೂಲೆಗಳಿಂದ- ದೂರದೂರಿಂದ ಮದುವೆಗಾಗಿ ಆಗಮಿಸಿದ್ದು ಗಮನ ಸೆಳೆಯುತ್ತಿತ್ತು.

error: Content is protected !!
Scroll to Top
%d bloggers like this: