ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಮಾ.20 ರಿಂದ 22
ಪುತ್ತೂರು : ವಾಲಿಬಾಲ್ ಅಸೋಸಿಯೇಶನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಮಾ.20 ರಿಂದ 22 ರ ತನಕ ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದ್ದು, ದಿನಾಂಕ 2020ರ ಮಾರ್ಚ್ 20,21,22 ಶುಕ್ರವಾರ,ಶನಿವಾರ, ಆದಿತ್ಯವಾರದಂದು ಪುತ್ತೂರಿನ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆ ತೆಂಕಿಲದಲ್ಲಿ ನಡೆಯಲಿದ್ದು, ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಆಹ್ವಾನಿತ ತಂಡಗಳ, ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ದೆಗಳು ನಡೆಯಲಿದ್ದು, ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಿಂದ ಸ್ಪರ್ದಿಗಳು ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ
ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂ.ಮಾ. ಶಾಲೆಯ ಕ್ರೀಡಾಂಗಣದಲ್ಲಿ ಗುರುವಾರ ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ತೆಂಗಿನ ಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು. ಅದಕ್ಕೆ ಮೊದಲು ಕ್ರೀಡಾಂಗಣದ ಪಕ್ಕೆ ನಾಗನ ಗುಡಿಯಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್, ತಾಲೂಕು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾ„ಕಾರಿ ಜಯರಾಮ ಗೌಡ, ವಿವೇಕಾನಂದ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ, ಪಂದ್ಯಾಟ ಸಮಿತಿಯ ಅಧ್ಯಕ್ಷ ಬೇಬಿ ಜಾನ್ ಪುರುಷರಕಟ್ಟೆ, ಕಾರ್ಯದರ್ಶಿ ಮೋನಪ್ಪ ಎಂ., ಕೋಶಾ„ಕಾರಿ ಪ್ರದೀಪ್ ಪಿ.ಆರ್., ಪ್ರಮುಖರಾದ ಅನುಪ್ ಪಿ.ಆರ್., ಶರತ್ ಆಳ್ವ, ನವನೀತ್, ದೈ.ಶಿ. ಶಿಕ್ಷಕರು, ಶಿಕ್ಷಕವೃಂದದವರು, ಪ್ರಮುಖರು ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಿರಿಯ ಹಾಗೂ ಕಿರಿಯ ವಾಲಿಬಾಲ್ ಪಟುಗಳನ್ನು ಒಳಗೊಂಡ ಪುರುಷರ ವಿಭಾಗದ 6 ಶ್ರೇಷ್ಠ ತಂಡಗಳು ಭಾಗವಹಿಸಲಿವೆ.
ಸುಮಾರು 5 ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ತ್ವರಿತವಾಗಿ ನಡೆಸಲಾಗುತ್ತಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ವಾಲಿಬಾಲ್ ತೀರ್ಪುಗಾರ ಶಿವರಾಮ ಕಜೆ ತಿಳಿಸಿದರು.