ವಿದ್ಯಾರ್ಥಿಗಳಿಗೆ ಕೋರೋನಾ ವೈರಸ್ ಸೋಂಕು ಬಗ್ಗೆ ಮಾಹಿತಿ ಶಿಬಿರ ಪುತ್ತೂರಿನ ” ಬಂಟರ ಭವನ”ದಲ್ಲಿ ದಿ. 7 ರಂದು ಶನಿವಾರ ನಡೆಯಲಿದೆ
ಪುತ್ತೂರು : ಲಯನ್ಸ್ ಕ್ಲಬ್, ಪುತ್ತೂರು ಕಾವು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯಾಧಿಕಾರಿಗಳ ಕಛೇರಿ ಪುತ್ತೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿ ಪುತ್ತೂರು ಇವರ ಸಹಕಾರದೋಂದಿಗೆ ಯುವ ಬಂಟರ ಸಂಘ, ಪುತ್ತೂರು ತಾಲೂಕು, ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಪುತ್ತೂರು ಇವೆ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಕೋರೋನಾ ವೈರಸ್ ಸೋಂಕು ಇದರ ಬಗ್ಗೆ ಮಾಹಿತಿ ಶಿಬಿರ ಪುತ್ತೂರಿನ ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ” ಬಂಟರ ಭವನ” ದಲ್ಲಿ ದಿನಾಂಕ 7 ರಂದು ಶನಿವಾರ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಪುತ್ತೂರು ಕಾವು ಅದ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾಹಿತಿ ಶಿಬಿರದಲ್ಲಿ ನಿವೃತ್ತ ಜಿಲ್ಲಾ ಆರೋಗ್ಯಧಿಕಾರಿ ಡಾ.ರಾಮಕೃಷ್ಣ ರಾವ್ ಮಾಹಿತಿ ನೀಡಲಿದ್ದು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ನಿಕಟ ಪೂರ್ವ ಅದ್ಯಕ್ಷೆ ಲ| ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಡಾ. ಸಿಕಂದರ್ ಪಾಶಾ, ಪುತ್ತೂರು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ತಾಲೂಕು ಆರೋಗ್ಯಧಿಕಾರಿ ಡಾ| ಆಶೋಕ್ ಕುಮಾರ್ ರೈ, ಶಿಕ್ಷಣಾದಿಕಾರಿ ಶ್ರೀ ಲೋಕೇಶ್ ಸಿ. ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಲ| ಗೋವರ್ದನ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅದ್ಯಕ್ಷರಾದ ಪ್ರಕಾಶ್ ರೈ ಸಾರಕೆರೆ, ಪ್ರಧಾನ ಕಾರ್ಯದರ್ಶಿ ಲ| ರಮೇಶ್ ರೈ ಸಾಂತ್ಯ, ಪ್ರಧಾನ ಕಾರ್ಯದರ್ಶಿ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಬನ್ನೂರು, ಉಪಾದ್ಯಕ್ಷರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.