ಬಿ.ಜೆ.ಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ

ಸವಣೂರು :ಬಿ.ಜೆಪಿ.ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸವಣೂರಿನ ರಾಕೇಶ್ ರೈ ಕೆಡೆಂಜಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.

ರಾಕೇಶ್ ರೈ ಕೆಡೆಂಜಿ ಅವರು ದ.ಕ.ಜಿಲ್ಲಾ ಬಿಜೆಪಿ ಸದಸ್ಯರಾಗಿ,ಸುಳ್ಯ ಮಂಡಲ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ,ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ರಾಕೇಶ್ ರೈ ಕೆಡೆಂಜಿ ಅವರು ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿ ತಾಲೂಕು,ಜಿಲ್ಲೆ,ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು,ತಾಲೂಕು ,ಜಿಲ್ಲಾ ಯುವ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಕೊಡಮಾಡುವ ವಿವೇಕ ಯುವಪ್ರಶಸ್ತಿಗೆ ಭಾಜನರಾಗಿದ್ದರು.

ನರಿಮೊಗರು ಜೆಸಿಐ ಅಧ್ಯಕ್ಷರಾಗಿ ವ್ಯಕ್ತಿತ್ವ ವಿಕಸನ ದಂತಹ ಹಲವು ತರಬೇತಿಗಳನ್ನು ದ.ಕ.ಉಡುಪಿ,ಕೊಡಗು ಜಿಲ್ಲೆಗಳನ್ನೊಳಗೊಂಡ ವಲಯ 15ರಲ್ಲಿ ವಲಯ ತರಬೇತುದಾರರಾಗಿ ನಡೆಸಿದ್ದಾರೆ. ವಲಯಾಽಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ರಕ್ತದಾನದ ಜತೆಗೆ ನೇತ್ರದಾನ ಶಿಬಿರಗಳನ್ನು ಆಯೋಜಿಸಿ ಸುಮಾರು 60 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಕಾರಣೀಭೂತರಾಗಿದ್ದಾರೆ.ಅಲ್ಲದೆ ಸವಣೂರು ಗ್ರಾ.ಪಂ.ಸದಸ್ಯರಾಗಿ,ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿದ್ದಾರೆ.ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆ ಸಮರ್ಪಣಾ ಸಮಿತಿ ಹಾಗೂ ಭಜನ ಸತ್ಸಂಗ ಸಮಾವೇಶ ಇದರ ಸವಣೂರು ವಲಯದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಅಲ್ಲದೆ 54 ಬಾರಿ ರಕ್ತದಾನ ಮಾಡಿ ರಕ್ತದಾನದ ಮಹತ್ವ ಕುರಿತ ಪ್ರಚಾರ ರಾಯಬಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.