ಕೊಳ್ತಿಗೆ | ನಾಪತ್ತೆಯಾಗಿದ್ದ ವಧು ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆ
ಪುತ್ತೂರು : ರಾತ್ರಿ ಮದರಂಗಿ ಶಾಸ್ತ್ರ ಮುಗಿಸಿ ಮನೆಯವರೆಲ್ಲ ಮಲಗಿದ ಮೇಲೆ ನಾಪತ್ತೆಯಾಗಿದ್ದ ಕೊಳ್ತಿಗೆಯ ಪುಲ್ಲಾಜೆಯ ನವ್ಯಾ ತನ್ನ ಪ್ರಿಯಕರನೊಂದಿಗೆ ಮೈಸೂರಿನ ಚಾಮರಾಜನಗರದ ಯಳಂದೂರು ಠಾಣೆಗೆ ಹಾಜರಾಗಿದ್ದಾಳೆ.
ಫೆ.26 ರಂದು ಆಕೆಗೆ ಪರ್ಪುಂಜ ಶಿವಕೃಪಾ ಹಾಲ್ನಲ್ಲಿ ಬೇರೊಬ್ಬ ಯುವಕನೊಂದಿಗೆ ಮದುವೆ ನಿಗದಿಯಾಗಿತ್ತು.
ಆದರೆ ವಧು ಮದುವೆ ದಿನ ಬೆಳ್ಳಂಬೆಳಗ್ಗೆ ದಿಡೀರ್ ನಾಪತ್ತೆಯಾಗಿದ್ದಳು. ವಧು ನವ್ಯಾ ತನ್ನ ಪ್ರಿಯಕರ, ಸಂಬಂಧಿಕ ಸುಳ್ಯ ತಾಲೂಕಿನ ಕಲ್ಮಡ್ಕದ ನವೀನ್ ಜತೆ ಬೈಕ್ನಲ್ಲಿ ಬೆಳಂಬೆಳಗ್ಗೆ ಪರಾರಿಯಾಗಿದ್ದಳು. ಮನೆಯವರನ್ನು ಆತಂಕಕ್ಕೆ ಮತ್ತು ಅವಮಾನಕ್ಕೆ ಒಳಪಡಿಸಿದ್ದಳು.
ಇದೀಗ ಇಬ್ಬರೂ ವಿವಾಹವಾಗಿ ಚಾಮರಾಜನಗರ ದ ಯಳಂದೂರು ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಆ ದಿನ ಮದುವೆಗೆ ಬೇಕಾದ ಒಡವೆ, ವಸ್ತ್ರ, ಮದುವೆಯ ಹಾಲ್, ಅಡುಗೆ ತಯಾರಿ, ವಾಹನ ಸೌಲತ್ತು, ಫೋಟೋಗ್ರಫಿ ಮತ್ತು ಮುಖ್ಯವಾಗಿ ನೆಂಟರಿಷ್ಟರ ಸಮಯವನ್ನು ವ್ಯರ್ಥ ಮಾಡಿದ ಹುಡುಗಿಯನ್ನು ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಓಡಿ ಹೋಗುವುದಿದ್ದರೆ ಇಷ್ಟೆಲ್ಲ ತಯಾರಿ ಆದ ಮೇಲೆ ಯಾಕೆ ಓಡಿ ಹೋಗಬೇಕಿತ್ತು ? ಮೊದಲೇ ಓಡಿ ಹೋಗಬಹುದಿತ್ತಲ್ಲ ?! ಎಂದು ಊರವರು ಮಾತಾಡಿಕೊಂಡಿದ್ದರು.
ಘಟನೆಯ ವಿವರ
ಮದುವೆಯ ದಿನ ಬೆಳ್ಳಂಬೆಳಗ್ಗೆ ಮದುಮಗಳು ನಾಪತ್ತೆಯಾಗಿ ಮದುವೆ ರದ್ದಾದ ಘಟನೆ ಸುಳ್ಯ ತಾ.ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಪೆರ್ಲಂಪಾಡಿ ಸಮೀಪ ನಡೆದಿತ್ತು. ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿ ವೈಯಾರದಲ್ಲಿ ನಿಲ್ಲಬೇಕಾದ ಯುವತಿ ಕಾಣದಂತೆ ಮಾಯವಾಗಿದ್ದಳು.
ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮನೆಮಂದಿ ನಿದ್ರೆಗೆ ಜಾರಿದರು. ಆದರೆ ಮದುಮಗಳು ನಿದ್ದೆ ಮಾಡದೇ ಮನೆಯಿಂದ ತಪ್ಪಿಸಿಕೊಂಡಿದ್ದಳು.
ಫೆ.26 ಮದುವೆ ದಿನ ಬೆಳಿಗ್ಗೆ 5 ಗಂಟೆ ಸುಮಾರಿಗೆ ವಧು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದ ಮನೆಯವರು ಹಾಲ್ಗೆ ಕರೆ ಮಾಡಿ ಮದುವೆ ಮುಂದೂಡಲಾಗಿದೆ. ಅಡುಗೆ ಮಾಡಬೇಡಿ ಎಂದು ತಿಳಿಸಿದ್ದರೆನ್ನಲಾಗಿದೆ. ಆದರೆ ಅಡುಗೆಗೆ ಎಲ್ಲ ತಯಾರಿಯೂ ನಡೆದಿತ್ತು.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮದುಮಗಳು ನವ್ಯ ಮನೆಯಿಂದ ತಪ್ಪಿಸಿಕೊಂಡಿದ್ದಳು.
ಈ ಕುರಿತು ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ನಾಪತ್ತೆ ಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ನವ್ಯಾ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿ ಚಾಮರಾಜನಗರದ ಯಳಂದೂರು ಠಾಣೆಗೆ ಹಾಜರಾಗಿದ್ದಾರೆ.