ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ, ಕೊಡಿ ನೀರು ಬಳಿ ಸರಣಿ ಅಪಘಾತ : ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯ
ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದ್ದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು, ಮಾ.4 ರಂದು ಸಂಜೆ ನಡೆದಿದೆ.
ಘಟನೆಯು ಕೊಡಿನೀರು ಬಸ್ ನಿಲ್ದಾಣದ ಬಳಿ ನಡೆದಿದ್ದು ಪುತ್ತೂರಿಗೆ ಹೋಗುತಿದ್ದ ಮಾರುತಿ 800 ಕಾರಿಗೆ ಪುತ್ತೂರು ಕಡೆಯಿಂದ ಬರುತಿದ್ದ ಬೈಕ್ ಗುದ್ದಿದೆ. ಆಗ ಬೈಕಿನಲ್ಲಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಆಗ ಗುದ್ದಿದ ಕಾರು ಸಡನ್ ಆಗಿ ಬ್ರೇಕ್ ಹಾಕಿರುವುದರಿಂದ ಕಾರಿನ ಹಿಂದಿನಿಂದ ಬರುತಿದ್ದ ಮತ್ತೊಂದು ಬೈಕ್ ಕಾರಿಗೆ ಗುದ್ದಿದೆ.
ಬೈಕ್ ನಿಂದ ಬಿದ್ದ ಗಾಯಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಸ್ಥಳದಲ್ಲಿ ಕೆಲದಿನಗಳ ಹಿಂದೆಯೂ ಸರಣಿ ಅಪಘಾತ ನಡೆದಿದ್ದು ಅದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.