ದೇಯಿ ಬೈದ್ಯೇತಿ ಕೋಟಿ ಚೆನ್ನಯರ ಸಮಾಗಮ: ಮಗುವಿನ ಹೆಜ್ಜೆಗುರುತು ನಮ್ಮದೆಂದು ನುಡಿದರು.

ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸದ ಬಳಿಕ ಮೂಲಸ್ಥಾನ ಗರಡಿ ನೇಮ ನಡೆಯಿತು.

ಮಾ. 1ರಂದು ರವಿವಾರ ಬೆಳಗ್ಗೆ ಭಜನ ಮಹೋತ್ಸವ, ಸಂಜೆ ಮೂಲಸ್ಥಾನ ಗರಡಿಯಲ್ಲಿ ಕಲಶ ಹೋಮ, ರಾತ್ರಿ ಮೂಲಸ್ಥಾನ ಗರಡಿಯಲ್ಲಿ ಕೋಟಿ- ಚೆನ್ನಯರ ದರ್ಶನ, ಬೆರ್ಮೆರ್‌ ಗುಂಡದಲ್ಲಿ ಫಲ ಸಮರ್ಪಣೆ ನಡೆಯಿತು.


Ad Widget

Ad Widget

Ad Widget

Ad Widget

Ad Widget

Ad Widget

ವೀರಪಥದಲ್ಲಿ ಕೋಟಿ-ಚೆನ್ನಯರ ಆಗಮನ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ, ಮಾತೆ-ಮಕ್ಕಳ ಪುನೀತ ಸಮಾಗಮ, ಕೋಟಿ ಚೆನ್ನಯರ ಮೂಲಸ್ಥಾನ ನೇಮ, ದರ್ಶನ ಸೇವೆ ನಡೆಯಿತು.

ನೇಮೋತ್ಸವದಲ್ಲಿ ಕೋಟಿ ಚೆನ್ನಯರು ತಾವು ಮಗುವಿನ ರೂಪದಲ್ಲಿ ದೇಯಿ ಬೈದ್ಯೇತಿ ಯ ಸಾನಿಧ್ಯ ದಲ್ಲಿ ಸಂಚರಿಸಿದ ವಿಚಾರವನ್ನು ಸನ್ನೆಯ ಮೂಲಕ ತಿಳಿಸಿದರು.

ಇದುವೇ ಅರ್ದನಾರೀಶ್ವರ ಮಂಡಲದಲ್ಲಿ ಕಾಣಿಸಿದ ಮಗುವಿನ ಕಾಲಿನ ಗಾತ್ರದ ಹೆಜ್ಜೆಗುರುತು.ಕ್ಷೇತ್ರದ ಪುನರುತ್ಥಾನದಿಂದ ತಾಯಿ-ಮಕ್ಕಳ ಸಮಾಗಮವಾಗಿರುವುದು ಕ್ಷೇತ್ರದ ಶಕ್ತಿಗಳಿಗೆ ಸಂತಸವಾಗಿದೆ ಎಂಬ ನುಡಿಯನ್ನು ದೈವ ನೀಡಿತು.

0 thoughts on “ದೇಯಿ ಬೈದ್ಯೇತಿ ಕೋಟಿ ಚೆನ್ನಯರ ಸಮಾಗಮ: ಮಗುವಿನ ಹೆಜ್ಜೆಗುರುತು ನಮ್ಮದೆಂದು ನುಡಿದರು.”

error: Content is protected !!
Scroll to Top
%d bloggers like this: