Big Twist ಮರ್ದಾಳ ಅಪಘಾತ: ಮರಳು ಅಕ್ರಮ ಸಾಗಾಟ ಲಾರಿಗೆ ಬೈಕ್ ಸವಾರ ಬಲಿ

ಕಡಬ: ಗೂಡ್ಸ್ ಟೆಂಪೋ (407) ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ರಾಜಸ್ಥಾನ ಮೂಲದ ಮೇಘರಾಜ (32) ಎಂಬಾತ ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ನಡೆದಿದೆ.

ಮರಳು ಅಕ್ರಮ ಸಾಗಟ ಮಾಡುತ್ತಿದ್ದ ಮಿನಿ ಲಾರಿಯ ಹಿಂಬಂದಿ ಚಕ್ರ ಮೇಘರಾಜ ತಲೆಯ ಮೇಲೆ ಹರಿದು ತಲೆ ಪೂರ್ತಿ ಛಿದ್ರ್ರಗೊಂಡಿದೆ.

ಕೋಡಿಂಬಾಳ ಗ್ರಾಮದ ಮುಳಿಯ ಎಂಬಲ್ಲಿ ಮನೆಯೊಂದರ ಟೈಲ್ಸ್ ಕೆಲಸ ಮಾಡುತ್ತಿದ್ದ ಮೇಘರಾಜ್ ಇದರ ಅಗತ್ಯ ವಸ್ತುಗಳನ್ನು ತರಲೆಂದು ಕಡಬಕ್ಕೆ ಹೋಗಿ ಬೈಕ್ನಲ್ಲಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡಬ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಂದೆ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶವವಿಟ್ಟು ಪ್ರತಿಭಟನೆ

ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿಕೊಂಡಿಲ್ಲ , ಲಾರಿ ಮಾಲಕರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ಮೇಘರಾಜ್ ಅವರ ಜೊತೆ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ಕಾರ್ಮಿಕರು ಶವ ಇರಿಸಿದ್ದ ಕಡಬದ ಶವಾಗಾರದ ಮುಂಬಾಗದಲ್ಲಿ ಧರಣಿ ಕುಳಿತರು.

ಅನ್‌ಲೋಡ್ ಮಾಡಿದ ಮರಳು

ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಅವರನ್ನು ಕರೆದೊಯ್ದು ಮಾತುಕತೆ ನಡೆಸಿ ಸಮಾಧಾನಪಡಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ್ತವ್ಯ ಇರುವ ರಾಜಸ್ಥಾನ ಮೂಲದ ಅನೂಪ್ ಸಿಂಗ್ ಎಂಬವರ ಜತೆ ಮೇಘರಾಜ ಕೆಲಸ ಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕೊಂಡೊಯ್ದು ಬಳಿಕ ಅಲ್ಲಿಂದ ವಿಮಾನದ ಮೂಲಕ ರಾಜಸ್ಥಾನದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುವುದು ಎಂದು ಅನೂಪ್ ಸಿಂಗ್ ತಿಳಿಸಿದರು.

ಲಾರಿಯಲ್ಲಿ ತುಂಬಿದ ಮರಳು

ಮರಳು ಖಾಲಿ ಮಾಡಿ ಲಾರಿ ತಂದಿರಿಸಿದರು

ಅಪಘಾತ ನಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳುವ ಮೊದಲು ಲಾರಿಯಲ್ಲಿದ್ದ ಮರಳನ್ನು ಅಪಘಾತ ನಡೆದ ಸ್ಥಳದ ಸಮೀಪ ಮನೆಯೊಂದರ ಬಳಿ ಖಾಲಿ ಮಾಡಿ ಲಾರಿಯನ್ನು ಮತ್ತೆ ಅಪಘಾತದ ಸ್ಥಳದಲ್ಲಿ ತಂದಿರಿಸಿದರು ಎಂದು ಸ್ಥಳೀಯರು ದೂರಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಸ್ಥಳಕ್ಕೆ ಬರುವ ಮೊದಲು ಅಪಘಾತಕ್ಕೆ ಕಾರಣವಾಗಿದ್ದ ವಾಹನವನ್ನು ಸ್ಥಳಾಂತರಿಸಿ ಮತ್ತೆ ತಂದಿರಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಿದಂತಾಗಿದೆ.

ಪ್ರತಿಭಟನೆ

ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದರೂ ಸ್ಕೂಟರ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಮೇಲೆ ಆತನ ತಲೆಯ ಮೇಲೆ ಲಾರಿಯ ಚಕ್ರ ಹರಿದಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Leave A Reply

Your email address will not be published.