ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಾಲೋಚನಾ ಸಭೆ, ಅಷ್ಟಮಂಗಲ ಚಿಂತನೆ-ಸಮಿತಿ ರಚನೆ
ಸವಣೂರು : ನಮ್ಮ ಯೋಜನೆಗಳು ಯೋಚನೆಗಳು ಅತ್ಯಂತ ಯಶಸ್ವಿಯಾಗಲು ಭಗವಂತನ ಅನುಗ್ರಹ ಪ್ರಾಪ್ತಿಯಾಗಿದ್ದು, ಮುಂದಿನ ದಿವಸಗಳಲ್ಲಿ ದೇವಸ್ಥಾನದ ವ್ಯವಸ್ಥೆಗಳಿಗೆ ವೇಗವನ್ನು ಕೊಟ್ಟು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಭಗವಂತನು ಶಕ್ತಿಯನ್ನು ಕೊಡಲಿ ಎಂದು ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಅವರು ಕುದ್ಮಾರು ಗ್ರಾಮದ ಬರೆಪ್ಪಾಡಿ ಪಾಂಡವ ಪ್ರತಿಷ್ಟೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ದೇವಸ್ಥಾನದ ವಠಾರದಲ್ಲಿ ಫೆ ೨೮ರಂದು ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಳೆದ ಶಿವರಾತ್ರಿಯ ದಿವಸ ಜೀರ್ಣೋದ್ಧಾರ ಸಂಕಲ್ಪ ಮಾಡಿದಂತೆ ಸಮಿತಿಯ ಮೂಲಕ ದೈವಜ್ಞರನ್ನು ಭೇಟಿ ಮಾಡಿ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಅವರ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಈಶ್ವರಮಂಗಲ ಶ್ರೀ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚತ ಮೂಡೆತ್ತಾಯ ಮಾತನಾಡಿ, ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮಾಡುವುದು ಪುಣ್ಯದ ಕಾರ್ಯ. ಈ ನಿಟ್ಟಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಪ್ರಶ್ನಾ ಚಿಂತನೆಯನ್ನು ನಡೆಸಲು ದೈವಜ್ಞರನ್ನು ದೇವರ ಪ್ರಾರ್ಥನೆಯೊಂದಿಗೆ ಆಯ್ಕೆ ಮಾಡಿ, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಅತೀ ಶೀಘ್ರದಲ್ಲಿ ನಡೆದು ಬ್ರಹ್ಮಕಲಶ ನಡೆಯಲಿ ಎಂದರು.
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಉದಯ ರೈ ಮಾದೋಡಿ, ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ, ಹಿರಿಯರಾದ ಐತಪ್ಪ ಗೌಡ ಕುವೆತ್ತೋಡಿ, ಶ್ರೀಧರ ಗೌಡ ಕೊಯಕ್ಕುಡೆ, ವಿಠಲ ಗೌಡ ಬರೆಪ್ಪಾಡಿ, ಸುಬ್ರಾಯ ಗೌಡ ಕೆರೆನಾರು, ಲೋಕೇಶ್ ಬಿ.ಎನ್, ಚಂದ್ರ ತೆಕ್ಕೆತ್ತಾಡಿ, ವಸಂತ ಕುಮಾರ್ ಬನಾರಿ, ರಾಜೇಶ್ ಬನಾರಿ, ಕುಕ್ಕಪ್ಪ ಗೌಡ ಕೂಂಕ್ಯ, ನವೀನ ಕೊಯಕ್ಕುಡೆ, ಅನಿಲ್ ಖಂಡಿಗ, ಆನಂದ ಕೂಂಕ್ಯ, ದೇವಣ್ಣ ಕೊಯಕ್ಕುಡೆ, ಚಂದ್ರಶೇಖರ ಆಚಾರ್ಯ ಬನಾರಿ, ಶಿವಾನಂದ ಕೆ, ಬಾಲಚಂದ್ರ ಬರೆಪ್ಪಾಡಿ, ದಾಮೋದರ ನಾಕಿರಣ, ಜಯರಾಮ್ ಎರ್ಮೆತ್ತಿಮಾರು, ಯೋಗೀಶ್ ಬರೆಪ್ಪಾಡಿ, ಚಿದಾನಂದ ಬರೆಪ್ಪಾಡಿ, ಸುಧಾಕರ್ ಕಾಣಿಯೂರು, ಪದ್ಮನಾಭ ಕೆರೆನಾರು, ಉಮೇಶ್ ಕೆರೆನಾರು, ಭಾಸ್ಕರ ದೇವರಗುಡ್ಡೆ, ಹರ್ಷಿತ್ ಮುದ್ಯ, ಧನಂಜಯ ನಡುಗುಡ್ಡೆ, ಪ್ರಶಾಂರ್ ಬರೆಪ್ಪಾಡಿ, ಲೋಹಿತ್ ಕೆಡೆಂಜಿ, ಪುರಂದರ, ಸೀತಾರಾಮ, ಪುನೀತ್ ಮುಂತಾದವರು ಉಪಸ್ಥಿತರಿದ್ದರು.
ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಪ್ರಶ್ನಾ ಚಿಂತನೆ ನಡೆಸಲು ದೈವಜ್ಞರನ್ನು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಚೀಟಿ ತೆಗೆಯುವ ಮೂಲಕ ಆಯ್ಕೆ ಮಾಡಲಾಯಿತು. ಚೆಕೋಟು ಸುಬ್ರಹ್ಮಣ್ಯ ಭಟ್ ಇವರು ಆಯ್ಕೆಯಾಗಿದ್ದು, ಶೀಘ್ರದಲ್ಲಿ ದೈವಜ್ಞರ ಭೇಟಿಗಾಗಿ ಸಭೆ ನಿರ್ಧರಿಸಿತು.
ಅಷ್ಟಮಂಗಲ ಚಿಂತನೆ-ಸಮಿತಿ ರಚನೆ: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಪ್ರಶ್ನಾ ಚಿಂತನೆ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಅಷ್ಠಮಂಗಲ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ವಿಠಲ ಗೌಡ ಬರೆಪ್ಪಾಡಿ, ಉಪಾಧ್ಯಕ್ಷರಾಗಿ ಶ್ರೀಧರ ಗೌಡ ಕೊಯಕ್ಕುಡೆ, ಜತ್ತಪ್ಪ ರೈ ಬರೆಪ್ಪಾಡಿ, ಕುಕ್ಕಪ್ಪ ಗೌಡ, ಸುಬ್ರಾಯ ಗೌಡ ಕೆರೆನಾರು, ಐತಪ್ಪ ಗೌಡ ಕುವೆತ್ತೋಡಿ, ಕಾರ್ಯದರ್ಶಿಯಾಗಿ ಲೋಕೇರ್ಶ ಬಿ.ಎನ್, ಜತೆ ಕಾರ್ಯದರ್ಶಿಯಾಗಿ ಅನಿಲ್ ಖಂಡಿಗ, ಮೇದಪ್ಪ ಗೌಡ, ಪುಷ್ಪಲತಾ ಬಿ, ಕೋಶಾಽಕಾರಿಯಾಗಿ ಹರ್ಷಿತ್ ಮುದ್ಯ, ಉಮೇಶ್ ಕೆರನಾರು ಇವರನ್ನು ಆಯ್ಕೆ ಮಾಡಲಾಯಿತು.
ಮೇದಪ್ಪ ಗೌಡ ಕುವೆತ್ತೋಡಿ, ಆನಂದ ಕೂಂಕ್ಯ, ರಾಜೇಶ್ ಬನಾರಿ, ದಾಮೋದರ ನಾಕಿರಣ, ಜಯರಾಮ ಸುವರ್ಣ ಎರ್ಮತ್ತಿಮಾರು, ಲೋಹಿತ್ ಕೆಡೆಂಜಿ, ಶಿವಾನಂದ ಕೆ, ಚಂದ್ರ ತೆಕ್ಕಿತ್ತಾಡಿ, ಪುರಂದರ ಗೌಡ ಇವರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ.
ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಸ್ವಾಗತಿಸಿ, ಲೋಕೇಶ್ ಬಿ.ಎನ್ ವಂದಿಸಿದರು.