ದೇಶದಲ್ಲಿ ನ್ಯಾಯ ಸಿಗದಿದ್ದರೆ ‘ ಶಹದತ್ ‘ ಗೂ ಸನ್ನದ್ಧ । ಪುತ್ತೂರಿನಲ್ಲಿ SDPI ಹೇಳಿಕೆ

ದೆಹಲಿ CAA ವಿರೋಧಿ ಪ್ರತಿಭಟನಾಕಾರರ ಮೇಲೆ ಸಂಘಪರಿವಾರ ಹಿಂಸಾಚಾರ ನಡೆಸಿದೆ ಎಂದು ಇವತ್ತು ಪುತ್ತೂರಿನಲ್ಲಿ ಗಾಂಧಿ ಕಟ್ಟೆಯ ಬಳಿ ಪ್ರತಿಭಟನೆ ನಡೆಯಿತು.

ದೆಹಲಿಯ ಶಹೀನ್ ಭಾಗ್ ನಲ್ಲಿ ಸಿ ಎ ಎ ಮತ್ತು ಎನ್ ಆರ್ ಸಿ ಶಾಂತಿಯುತ ಪ್ರತಿಭಟನೆ ನಡೆದರೆ, ಅದನ್ನು ಹತ್ತಿಕ್ಕಲು ಸಂಘಿಗಳು ಪ್ರಯತ್ನಿಸುತ್ತಿದ್ದಾರೆ. ಪ್ರತಿಭಟನೆಯ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆದಿದೆ. ಹಿಂದೆ ಗುಜರಾತಿನಲ್ಲಿ ಕಂಡಿದ್ದ ಮಾರಣಹೋಮವ ಈಗ ದೆಹಲಿಯಲ್ಲೂ ಕಾಣುತಿದೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೆ ಎ ಸಿದ್ದೀಕ್ ಅವರು ಹೇಳಿದರು.

ಪುತ್ತೂರಿನ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಇವರು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಮೋದಿ ಸರಕಾರ ಬಂದ ನಂತರ ಬಡವರಿಗೆ ಅನ್ಯಾಯ ಆಗುತ್ತಿದೆ. ಶಹೀನ್ ಭಾಗ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರೆ, ಕೈಯಲ್ಲಿ ಪಿಸ್ತೂಲು ಹಿಡಿದು ಗೋಪಾಲ್ ವ್ಯಕ್ತಿ ಯಾಕೆ ಬಂದ. ಪೊಲೀಸರು ಆತನನ್ನು ಬಿಟ್ಟುದಾದರೂ ಯಾಕೆ ಎಂದು ಅವರು ಪ್ರಶ್ನಿಸಿದರು. ನಮಗೆ ಎಲ್ಲೂ ನ್ಯಾಯ ಸಿಗುತ್ತಿಲ್ಲ. ಅವತ್ತು ನರಸಿಂಹ ರಾವ್ ಅವರು ನಮ್ಮ ಬಾಬರಿ ಮಸೀದಿಯನ್ನು ಕೆಡವಲು ಬಿಟ್ಟರು. ಹೀಗೆ ಆದರೆ ನಮಗೆ ಉಳಿಗಾಲವಿಲ್ಲ. ನಾವು ಶಾಹದತ್ ಗಾಗಿ ರೆಡಿಯಾಗಬೇಕು. ಭಯವಿಲ್ಲದ ಭಾರತ ಕಟ್ಟಲು ರಸ್ತೆಗೆ ಇಳಿಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸುಮಾರು 50 ಕ್ಕೂಪ್ರತಿಭಟನಾಕಾರರು ಸೇರಿದ್ದರು.

Leave A Reply

Your email address will not be published.