ಕೊಳ್ತಿಗೆ | ಮದುವೆ ದಿನ ಮದುಮಗಳು ಪನಂದೆ ಪದ್ರಾಡ್ | ಮದುವೆ ರದ್ದು !
ಬೆಳ್ಳಾರೆ : ಮದುವೆಯ ದಿನ ಬೆಳ್ಳಂಬೆಳಗ್ಗೆ ಮದುಮಗಳು ನಾಪತ್ತೆಯಾಗಿ ಮದುವೆ ರದ್ದಾದ ಘಟನೆ ಸುಳ್ಯ ತಾ.ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಪೆರ್ಲಂಪಾಡಿ ಸಮೀಪ ನಡೆದಿದೆ.
ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮದುವೆಗೆ ತಯಾರಾಗಿ ವೈಯಾರದಲ್ಲಿ ನಿಲ್ಲಬೇಕಾದ ಯುವತಿ ಕಾಣದಂತೆ ಮಾಯವಾಗಿದ್ದಾಳೆ.
ಮದುರಂಗಿ ಶಾಸ್ತ್ರ ಮುಗಿಸಿಕೊಂಡು ಮನೆಮಂದಿ ನಿದ್ರೆಗೆ ಜಾರಿದರು. ಆದರೆ ಮದುಮಗಳು ನಿದ್ದೆ ಮಾಡದೇ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ. ಈಗ ಮನೆಯವರ ನಿದ್ದೆ ಕೂಡ ಕೆಡಿಸಿದ್ದಾಳೆ !
ಈಕೆಯ ವಿವಾಹವು ಪುತ್ತೂರು ತಾಲೂಕಿನ ಹಾಲ್ ಒಂದರಲ್ಲಿ ಫೆ.26 ರಂದು ನಿಗದಿಯಾಗಿತ್ತು.
ಮದುವೆ ದಿನ ಬೆಳಿಗ್ಗೆ 5 ಗಂಟೆ ಸುಮಾರಿಗೆ ವಧು ಮನೆಯಲ್ಲಿ ಇಲ್ಲದಿರುವುದನ್ನು ತಿಳಿದ ಮನೆಯವರು ಹಾಲ್‌ಗೆ ಕರೆ ಮಾಡಿ ಮದುವೆ ಮುಂದೂಡಲಾಗಿದೆ. ಅಡುಗೆ ಮಾಡಬೇಡಿ ಎಂದು ತಿಳಿಸಿದ್ದರೆನ್ನಲಾಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮದುಮಗಳು ನವ್ಯ ಮನೆಯಿಂದ ತಪ್ಪಿಸಿಕೊಂಡಿದ್ದಾಳೆ .
ಈ ಕುರಿತು ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೇಶದಲ್ಲಿ ನ್ಯಾಯ ಸಿಗದಿದ್ದರೆ ‘ ಶಹದತ್ ‘ ಗೂ ಸನ್ನದ್ಧ । ಪುತ್ತೂರಿನಲ್ಲಿ SDPI ಹೇಳಿಕೆ