ಸಂಭ್ರಮದ ಕಾಣಿಯೂರು ಜಾತ್ರೆ
ಕಾಣಿಯೂರು ಶ್ರೀ ಮಠದ ಜಾತ್ರೋತ್ಸವ ಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮದ್ವಾರ್ಯ ಮೂಲ ಸಂಸ್ಥಾನಂ ಉಡುಪಿ ಕಾಣಿಯೂರು ಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಆದೇಶದಂತೆ ಕಾಣಿಯೂರು ಜಾತ್ರೆಯು ಫೆ 21ರಿಂದ ಪ್ರಾರಂಭಗೊಂಡು ಫೆ 25ರವರೆಗೆ ನಡೆಯಿತು.
ಫೆ 14ರಂದು ಕಾಣಿಯೂರು ಶ್ರೀ ಮಠದಲ್ಲಿ ನಡೆದ ಗೊನೆ ಮೂಹುರ್ತದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಫೆ 19ರಂದು ಮುಂಡ್ಯ ಹಾಕಲಾಯಿತು. ಫೆ 21ರಂದು ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, ಫೆ 22ರಂದು ಬೆಳಿಗ್ಗೆ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ನವಕ ಕಲಶಾಭೀಷೇಕ, ಗಣಪತಿ ಹೋಮ, ಮಹಾಪೂಜೆ, ಉಳ್ಳಾಕುಲು ಸನ್ನಿಧಿಯಲ್ಲಿ ನವಕ ಕಲಶಾಭಿಷೇಕ, ಗಣಪತಿ ಹೋಮ, ಮಹಾಪೂಜೆ, ಶ್ರೀ ಕಾಣಿಯೂರು ಉಳ್ಳಾಕುಲು ಮಾಡದ ಸನ್ನಿಧಿಯಲ್ಲಿ ಹಸಿರು ಕಾಣಿಕೆ ಸಮರ್ಪಣೆ ನಡೆದು, ರಾತ್ರಿ ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಆಶ್ರಯದಲ್ಲಿ ಕಾಣಿಯೂರು ಜಾತ್ರಾ ಗದ್ದೆಯಲ್ಲಿ ಗಣೇಶ ಮ್ಯೂಸಿಕಲ್ ಸುಳ್ಯ ಇವರಿಂದ ಭಕ್ತಿ ಗಾನಸುಧೆ, ‘ಮಾಯಾಲೋಕ’ ಕಲ್ಲಡ್ಕ ಬಳಗದವರಿಂದ ಮತ್ತು ಯಕ್ಷಧ್ವನಿ ಅನುಕರಣೆ, ಮಿಮಿಕ್ರಿ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಫೆ 23ರಂದು ಬೆಳಿಗ್ಗೆ ಮಲ್ಲಾರ ನೇಮ, ದೈಯರ ನೇಮ, ರಾತ್ರಿ ಬಯ್ಯದ ಬಲಿ, ಫೆ 24ರಂದು ಮಧ್ಯಾಹ್ನ ಎಲ್ಯಾರ ನೇಮ, ಮಾಣಿ ದೈವದ ನೇಮ, ನಾಯರ್ ನೇಮ ಧ್ವಜಾವರೋಹಣ, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಫೆ 25 ರಂದು ಬೆಳಿಗ್ಗೆ ಕಾಣಿಯೂರು ಶ್ರೀ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅಪರಾಹ್ನ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ ನಡೆಯಿತು.