ದಂತ ಜೋರ ನರಹಂತಕ ವೀರಪ್ಪನ್ ನ ಮಗಳು ವಿದ್ಯಾರಾಣಿ ಬಿಜೆಪಿಗೆ | ಮತ ಬೇಟೆ ಶುರು !

ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಮತ್ತು ತಮಿಳುನಾಡಿನ ಮಾಜಿ ಕೇಂದ್ರ ಮಂತ್ರಿ ಪೊನ್ ರಾಮಕೃಷ್ಣನ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದಳು.

ಸುಮಾರು 120 ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಕರ್ನಾಟಕ ಕೇರಳ ತಮಿಳುನಾಡು ಕಾಡನ್ನು ಅಕ್ಷರಶ: ರಾಜನಂತೆ ಆಳಿದವನು ವೀರಪ್ಪನ್.

ಈಗ ಆತನ ಮಗಳು ಬಿಜೆಪಿ ಸೇರಿ ರಾಜಕಾರಣಿಯಾಗಲು ಹೊರಟಿದ್ದಾಳೆ. ಅಪ್ಪನಿಗೆ ಸ್ವತಃ ರಾಜಕಾರಣಿಯಾಗಬೇಕೆಂಬ ತುಡಿತವಿತ್ತು. ಆದರೆ ಆತ ಕ್ರೌರ್ಯದ ದಾರಿ ಹಿಡಿದ. ಮುಖ್ಯವಾಹಿನಿಗೆ ಆತನಿಗೆ ಬರಲಾಗಲೇ ಇಲ್ಲ.

ಇತ್ತ ಮಗಳು, ಅಪ್ಪ ನಡೆಸಿದ ಕ್ರೌರ್ಯದ ಬದುಕನ್ನು ಕಣ್ಣಾರೆ ಕಂಡಿದ್ದಾಳೆ. ತನ್ನ ಅಮ್ಮ ಅನುಭವಿಸಿದ ನೋವನ್ನು, ವೀರಪ್ಪನ್ ನ ಮಗಳಾಗಿ ಆಕೆ ಅನುಭವಿಸಿದ ಅಸ್ಥಿರ ಬಾಲ್ಯವನ್ನು, ತನ್ನ ಸುತ್ತಮುತ್ತಲ ಪ್ರದೇಶಗಳ ಜನರ ಬಡತನವನ್ನು ಚಿಕ್ಕಪ್ರಾಯದಲ್ಲಿ ಕಂಡ ವಿದ್ಯಾರಾಣಿ ಈಗ ರಾಜಕಾರಣಿಯಾಗಲು ಹೊರಟಿದ್ದಾಳೆ. ಕಷ್ಟದಲ್ಲೇ ಬೆಳೆದ ಆಕೆ ಒಳ್ಳೆ ರಾಜಕಾರಣಿಯಾಗಬಲ್ಲಳು.

” ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರಿಗಾಗಿ ಹಲವು ಕಾರ್ಯಕ್ರಮಗಳನ್ನು ತಂದಿದ್ದಾರೆ. ನಾನು ಅವುಗಳನ್ನು ಸಮಾಜದ ಎಲ್ಲ ಜಾತಿ ಧರ್ಮದ ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದು ಬಿಜೆಪಿ ಬಾವುಟ ಹಿಡಿಯುವ ಸಂದರ್ಭದಲ್ಲಿ ಆಕೆ ಹೇಳಿದಳು ”

Leave A Reply

Your email address will not be published.