ಬಂಟ್ವಾಳದ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಗಾಂಜಾ ವಶ : ಆರೋಪಿ ಹ್ಯಾರೀಸ್ ವಿಟ್ಲ ಪೊಲೀಸರ ಕೈ ವಶ

ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ವಿಟ್ಲ ಪೊಲೀಸರು ದಾಳಿ ನಡೆಸಿ ಮಾದಕ ವಸ್ತುವಾದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. 

ಇಂದು ಬೆಳಿಗ್ಗೆ ಸುಮಾರು 9.30 ಗಂಟೆಗೆ  ಕೆಎಲ್ 11- ಡಬ್ಲ್ಯೂ- 3418 ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯಲ್ಲಿ  ಮಾದಕ ವಸ್ತುವಾದ ಗಾಂಜಾವನ್ನು ಅಕ್ರಮವಾಗಿ ಸಾಗಾಟ ನಡೆಸಲು ಉದ್ದೇಶಿಸಲಾಗಿತ್ತು.


Ad Widget

ಘಟನೆಯ ಜಾಡನ್ನು ಅರಿತ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿದರು. ಆಗ 1.46 ಕೆಜಿ ಗಾಂಜಾವನ್ನು ಮತ್ತು ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ 6 ಲಕ್ಷ ಮೌಲ್ಯದ ಟಿಪ್ಪರ್ ಲಾರಿಯನ್ನು  ಹಾಗೂ 1 ಮೊಬೈಲ್ ಪೋನನ್ನು ಪತ್ತೆ ಮಾಡಿ ವಶಪಡಿಸಿಕೊಂಡಿರುತ್ತಾರೆ.

ಆರೋಪಿ ಬಂಟ್ವಾಳ ಅಳಿಕೆ ಗ್ರಾಮದ ನಿವಾಸಿಯಾದ 27 ವರ್ಷ ಹ್ಯಾರೀಸ್ ಎಂಬವನನ್ನು, ಇನ್ನೇನು ತಪ್ಪಿಸಿ ಕೊಳ್ಳುವ ಹಂತದಲ್ಲಿ ಬಂಧಿಸಿರುತ್ತಾರೆ.


Ad Widget

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿರುತ್ತದೆ.


Ad Widget

ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಗಾಂಜಾ ಜಾಲ ಹರಡಿರುವ ಸಾಧ್ಯತೆಯ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!
Scroll to Top
%d bloggers like this: