ನರಿಮೊಗರು |ಮೃತ್ಯುಂಜಯೇಶ್ವರ ದೇವಸ್ಥಾನಕ್ಕೆ ಶೋಭಾ ಕರಂದ್ಲಾಜೆ ಬೇಟಿ |ಕ್ಷೇತ್ರದ ಪುಷ್ಕರಣಿ ಅಭಿವೃದ್ದಿಗೆ ಅನುದಾನಕ್ಕೆ ಪ್ರಯತ್ನ-ಶೋಭಾ
ನರಿಮೊಗರು : ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿರುವ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಬೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕ್ಷೇತ್ರದ ಪುಷ್ಕರಣಿಯನ್ನು ವೀಕ್ಷಿಸಿದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್ ಅವರು ಪ್ರಾಚೀನ ಪುಷ್ಕರಿಣಿಯ ಅಭಿವೃದ್ದಿ ನಿಟ್ಟಿನಲ್ಲಿ ಈಗಾಗಲೇ ಭಕ್ತಾ„ಗಳ ಸಭೆ ನಡೆಸಲಾಗಿದ್ದು, ಅಭಿವೃದ್ದಿ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಶೋಭಾ ಕರಂದ್ಲಾಜೆ ಅವರು ಮಾತನಾಡಿ,ಪುಷ್ಕರಣಿ ಅಭಿವೃದ್ದಿಗೆ ಸರಕಾರದ ಮೂಲಕ ಅನುದಾನ ಮಂಜೂರು ಮಾಡಲು ಪ್ರಯತ್ನಿಸಲಾಗುವುದು.ಸುಮಾರು 1 ಕೋಟಿ ವೆಚ್ಚದ ಆವಶ್ಯಕತೆ ಕುರಿತು ಬೇಡಿಕೆ ಇಡಲಾಗುವುದು ಎಂದರು.
ದೇವಾಲಯದ ಗರ್ಭಗುಡಿಯಲ್ಲಿ ದೇವರಿಗೆ ಮಾಡಿದ ಅಭಿಷೇಕ ನೀರು ಒಳಾಂಗಣದಲ್ಲಿರುವ ತೀರ್ಥ ಬಾವಿಯಾಗಿ ಹೊರಭಾಗದಲ್ಲಿರುವ ಪುಷ್ಕರಣಿ ಕೆರೆಗೆ ಸಂಪರ್ಕ ಕಲ್ಪಿಸುತ್ತದೆ. ಕಾಶಿ ಕ್ಷೇತ್ರವನ್ನು ಬಿಟ್ಟರೆ ಈಶಾನ್ಯ ಭಾಗದಲ್ಲಿ ಪುಷ್ಕರಣಿ ಮುಂಡೂರಿನಲ್ಲಿ ಮಾತ್ರ ಇದೆ. ವರ್ಷವಿಡೀ ಇದರಲ್ಲಿ ನೀರು ತುಂಬಿರುತ್ತದೆ ಇದು ಇಲ್ಲಿನ ಪುಷ್ಕರಿಣಿಯ ವೈಶಿಷ್ಟ್ಯವಾಗಿದೆ.
ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್,ಸಾಮಾಜಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ,ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ,ಕಾಣಿಯೂರು ಗ್ರಾ.ಪಂ.ಸದಸ್ಯ ಗಣೇಶ್ ಉದುನಡ್ಕ, ಮುಂಡೂರು ಗ್ರಾ.ಪಂ.ಸದಸ್ಯ ಅಶೋಕ್ ಕುಮಾರ್ ಪುತ್ತಿಲ,ಶ್ರೀಕಾಂತ್ ಆಚಾರ್,ಪ್ರಸಾದ್ ಪಾಂಗಾಣ್ಣಾಯ,ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.