ಸುಬ್ರಹ್ಮಣ್ಯ ಕಾಡಾನೆಯ ಪೇಟೆ ಸವಾರಿ!
ಸುಬ್ರಹ್ಮಣ್ಯ: ಇಂದು ಬೆಳಿಗ್ಗೆ ಸುಬ್ರಹ್ಮಣ್ಯದಲ್ಲಿ , ಧಿಡೀರ್ ಆಗಿ ಕಾಡಾನೆಯೊಂದು ಪ್ರತ್ಯಕ್ಷ ವಾಗಿ ಭಕ್ತಾದಿಗಳಿಗೆ ಅರೆಗಳಿಗೆ ಆತಂಕ ಸೃಷ್ಟಿಸಿತು.
ಸುಮಾರು 05:45 ಸಮಯಕ್ಕೆ ಈ ಕಾಡಾನೆ ಕುಮಾರಧಾರ ಸ್ನಾನ ಘಟ್ಟ ಪಕ್ಕದ ಮಯೂರ ಲಾಡ್ಜ್ ಹತ್ತಿರದಿಂದ ಕಾಶಿಕಟ್ಟೆ ಗೆ ಬಂದಿದ್ದಾಗ ಜನರು ಮೊದಲು ಗಮನಿಸಿದರು. ಆ ನಂತರ ಕಾಡಾನೆಯು ಕಾಶಿಕಟ್ಟೆಯಿಂದ ಆದಿ ಸುಬ್ರಹ್ಮಣ್ಯ ರಸ್ತೆಯಲ್ಲಿ ರಾಜಾರೋಷವಾಗಿ, ಸಾವಕಾಶವಾಗಿ ನಡೆದುಕೊಂಡು ಹೋಗಿದೆ.
ಶರವಣ ರೆಸಿಡೆನ್ಸಿ ಪಕ್ಕದಿಂದ ಹಾದು ನೂಚಿಲದಿಂದ ಒಂಟಿಕಟ್ಟೆ ಕಡೆಗೆ ಹೋಗಿದೆ ಎಂದು ಹೇಳಲಾಗಿದೆ
ಕಾಡಾನೆಯು ಇಂಜಾಡಿ ಭಾಗದಿಂದ ಬಂದಿರುವ ಸಾಧ್ಯತೆ ಇದೆ.
ಆನೆಯು ತನ್ನ ಹಿಂಡಿನಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂತಾ ಅಥವಾ ಆಹಾರ ಅರಸಿಕೊಂಡು ಬಂತಾ ಅನ್ನುವುದು ಜನರ ಪ್ರಶ್ನೆಯಾಗಿಯೇ ಉಳಿದಿದೆ.
ಮೊನ್ನೆ ನೇತ್ರಾವತಿ ನದಿ ತಟ ದಲ್ಲಿ, ಮಂಗಳೂರಿನ ಕೋಟೆಪುರ ದಲ್ಲಿ ಚಿರತೆ ಊರಿಗೆ ನುಗ್ಗಿ ಮನೆಯ ನಾಯಿಗಳನ್ನು ಎತ್ತಿಕೊಂಡು ಹೋಗಿತ್ತು.