ಸುಳ್ಯ ಜೇಸಿಐ ಪಯಸ್ವಿನಿ ವತಿಯಿಂದ ಘಟಕ ಅಭಿವೃದ್ಧಿ ನಿರ್ವಹಣಾ ತರಬೇತಿ ಕಾರ್ಯಗಾರ

ಸುಳ್ಯ :ಅಂತರಾಷ್ಟ್ರೀಯ ಸೇವಾ ಸಂಸ್ಥೆ ಜೇಸಿಐ ಇದರ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ ಜೇಸಿಐ ಪದಾಧಿಕಾರಿಗಳಿಗೆ ಸುಳ್ಯದ ಪರಿವಾರಕಾನದ ಹೋಟೆಲ್ ಉಡುಪಿ ಗಾರ್ಡನ್ ಗ್ರಾಂಡ್ ಪರಿವಾರದಲ್ಲಿ ಒಂದು ದಿನದ ಘಟಕ ಅಭಿವೃದ್ಧಿ ನಿರ್ವಹಣಾ ತರಬೇತಿ ನಡೆಯಿತು. ಈ ತರಬೇತಿಯನ್ನು ಜೇಸಿಐ ವಲಯ ಪ್ರಾಂತ್ಯ XV ಉಪಾಧ್ಯಕ್ಷರಾದ JFP ಪ್ರದೀಪ್ ಬಾಕಿಲರವರು ನಡೆಸಿಕೊಟ್ಟರು.


Ad Widget

Ad Widget

Ad Widget

Ad Widget

Ad Widget

Ad Widget

ಘಟಕದ ಆಡಳಿತ ನಿರ್ವಹಣೆಯ ಬಗ್ಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಪ್ರಧಾನ ತರಬೇತಿದಾರರು ವಿವರವಾಗಿ ತಿಳಿಸಿಕೊಟ್ಟರು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಜೇಸೀ ದೇವರಾಜ್ ಕುದ್ಪಾಜೆ ಸಭಾಧ್ಯಕ್ಷತೆಯನ್ನು ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾಗಿ ಜೇಸೀ ರವಿಕುಮಾರ್ ಅಕ್ಕೋಜಿಪಾಲ್, ಜೇಸೀರೆಟ್ ಅಧ್ಯಕ್ಷೆ ಚೈತನ್ಯ ದೇವರಾಜ್, ಯುವಜೇಸೀ ಅಧ್ಯಕ್ಷ ಚಿತ್ತಾರ ಬಂಟ್ವಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚೇತನ ಚಿಲ್ಪಾರು ವೇದಿಕೆಗೆ ಅತಿಥಿಗಳನ್ನು ಆಹ್ವಾನಿಸಿದರು. ಹಾಗೂ ಜೇಸೀ ರಂಜಿತ್ ಕುಕ್ಕೇಟ್ಟಿ ಜೇಸೀವಾಣಿ ವಾಚಿಸಿದರು. ಕಾರ್ಯದರ್ಶಿ ಜೇಸೀ ಚೇತನ ಅಮೆಮನೆ ವಂದಿಸಿದರು.

error: Content is protected !!
Scroll to Top
%d bloggers like this: