ಬೆಳ್ಳಾರೆ ಠಾಣಾ ಉಪನಿರೀಕ್ಷಕರಾಗಿ ಆಂಜನೇಯ ರೆಡ್ಡಿ

ಸುಳ್ಯ :ತಾಲೂಕಿನ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ಡಿ ಎನ್ ರವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡ ಬಳಿಕ ತೆರವಾದ ಸ್ಥಾನಕ್ಕೆ ಆಂಜನೇಯ ರೆಡ್ಡಿ ಅವರನ್ನು ಸರಕಾರ ನೇಮಕಗೊಳಿಸಿದೆ.

ಈರಯ್ಯ ಡಿ.ಎನ್

ಡಿ.ಎನ್.ಈರಯ್ಯ ಅವರು ವರ್ಗವಾಗಿ 2 ತಿಂಗಳುಗಳು ಕಳೆದರೂ, ತೆರವಾದ ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಹುದ್ದೆಗೆ ನೂತನ ಎಸ್ ಐ ನೇಮಕವಾಗಿರಲಿಲ್ಲ.

ಆಂಜನೇಯ ರೆಡ್ಡಿ

ಖಡಕ್ ಎಸೈ ಆಗಿದ್ದ ಈರಯ್ಯ ಅವರು ವರ್ಗಾವಣೆಗೊಂಡ ಬಳಿಕ ಕೆಲ ದಿನಗಳ ಕಾಲ ಎಎಸ್ ಐ ಮಧುರವರು ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಬಳಿಕ ಪ್ರೊಬೆಷನರಿ ಎಸ್ ಐ ಆಗಿರುವ ಆಂಜನೇಯ ರೆಡ್ಡಿರವರು ಠಾಣೆಯ ಪ್ರಭಾರ ಠಾಣಾಧಿಕಾರಿಯಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು.

ಇದೀಗ ಪ್ರಭಾರ ಕರ್ತವ್ಯದಲ್ಲಿದ್ದ ಆಂಜನೇಯ ರೆಡ್ಡಿ ಅವರನ್ನೇ ನೇಮಕಗೊಳಿಸಿದೆ.

Leave A Reply

Your email address will not be published.