ಪುತ್ತೂರು ಕುರಿಯ ಗ್ರಾಮದಲ್ಲಿ ಸಹೋದರನಿಂದಲೇ ಸುಪಾರಿ ಕೊಲೆ ಯತ್ನ । ಸ್ವಲ್ಪ ಯಾಮಾರಿದ್ದರೆ ಹರೋ ಹರ !

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಫ್ತಿಯ ಪುತ್ತೂರು ಕುರಿಯ ಗ್ರಾಮದ ನಿವಾಸಿ ಮಹೇಶ್‌ ಯಾನೆ ಮಾಯಿಲಪ್ಪನು ತನ್ನ ಸ್ವಂತ ಸಹೋದರನ ಕೊಲೆ ಮಾಡಲು ಸಂಚು ನಡೆಸಿದ್ದು ಬಯಲಿಗೆ ಬಂದಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

ಜಯರಾಮರು ಪ್ರಾಯ (34 ವರ್ಷ) ಎಂಬವರು ಅವರ ಸಹೋದರ ಮಹೇಶ್‌ ಯಾನೆ ಮಾಯಿಲಪ್ಪ ಜತೆಗೂಡಿ ಹೋಮ್‌ ಪ್ರೊಡಕ್ಟ್‌ ವ್ಯವಹಾರ ನಡೆಸುತ್ತಿದ್ದರು. ಇತ್ತೀಚಿಗೆ ವ್ಯವಹಾರದ ಸಲುವಾಗಿ ಅವರಿಬ್ಬರ ಮಧ್ಯೆ ವೈಮನಸ್ಸು ಮೂಡಿತ್ತು. ಅವರೊಳಗೆ ಉಂಟಾಗಿದ್ದ ವೈಮನಸ್ಸಿನಿಂದ ಹಾಗೂ ಕುಟುಂಬದ ಆಸ್ತಿ ವಿಚಾರವಾಗಿ ಉಂಟಾದ ಮನಸ್ತಾಪದಿಂದಾಗಿ ಮಹೇಶ್‌ ಯಾನೆ ಮಾಯಿಲಪ್ಪನು ತನ್ನ ಸಹೋದರ ಜಯರಾಮರನ್ನು ಮುಗಿಸಿ ಹಾಕಲು ಸಂಚು ನಡೆಸಿದ್ದನು.

ಅದಕ್ಕೆ ನಾಸೀರ್‌ ಅಲಿಯಾಸ್ ಮುನ್ನಿ ಎಂಬವನೊಂದಿಗೆ ಸೇರಿಕೊಂಡು ಹಾಗೂ ಪುತ್ತೂರು ವೀರಮಂಗಲದ ನಿವಾಸಿ ಮಹಮ್ಮದ್‌ ಹಾರೀಶ್‌ ನ ಮುಖಾಂತರ ಜಯರಾಮರನ್ನು ಕೊಲೆ ಮಾಡಲು ಪ್ರೇರೇಪಣೆ ನೀಡಿರುವುದು ಜಯರಾಮ ಅವರ ಗಮನಕ್ಕೆ ಬಂದಿತ್ತು.

ತನ್ನ ಕೊಲೆಯ ಸಂಚಿನ ಬಗ್ಗೆ ಅದೇಗೋ ಸುಳಿವು ಅರಿತ ಜಯರಾಮರವರು ತಕ್ಷಣ ದಿನಾಂಕ 18.02.2020 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಾಥಮಿಕ ತನಿಖೆಯಿಂದ ಕೊಲೆ ಸಂಚು ಖಚಿತವಾದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಕ್ಷಣಕ್ಕೆ ಎಚ್ಚೆತ್ತುಕೊಂಡ ಜಯರಾಮರವರು ಜೀವ ಉಳಿಸಿಕೊಂಡಿದ್ದಾರೆ.

KSRTC ಯಲ್ಲಿ 3745 ಖಾಲಿ ಹುದ್ದೆ ಭರ್ತಿ ಪ್ರಕ್ರಿಯೆ | ನಿಮ್ಮೂರ ಹುಡುಗ-ಹುಡುಗಿಯರಿಗೆ ವಿಷಯ ತಲುಪಿಸಿ

Leave A Reply

Your email address will not be published.