ಕೋಡಿಂಬಾಡಿ ಮಠಂತಬೆಟ್ಟು ಬ್ರಹ್ಮಕಲಶ: ಅಮ್ಮನ ಚರಿತ್ರೆ ಚಿಣ್ಣರ ವಿಮರ್ಶೆ

ಪುತ್ತೂರು : ಏಪ್ರಿಲ್ 21 ರಿಂದ 27 ನೇ ತಾರೀಖಿನವರೆಗೆ ಕೋಡಿಂಬಾಡಿಯ  ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟುವಿನಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಳದ ‘ ಚಿಣ್ಣರ ಸಮಿತಿಯ ‘ ವತಿಯಿಂದ ಆಯ್ದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ  ಶ್ರೀ ದೇವಳದ ಇತಿಹಾಸವನ್ನು ತಿಳಿಯಪಡಿಸುವ ಉದ್ದೇಶದಿಂದ ಬ್ರಹ್ಮಕಲಶೋತ್ಸವದ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಯೋಜನೆಯೊಂದಿಗೆ ‘ ಅಮ್ಮನ ಚರಿತ್ರೆ, ಚಿಣ್ಣರ ವಿಮರ್ಶೆ ‘ ಎಂಬ ವಿಶಿಷ್ಟ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಡ್ಕ-ಪೆರ್ನೆಯಲ್ಲಿ  ನಡೆಯಿತು.

 

ಈ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಚಿಣ್ಣರ ಸಮಿತಿಯ ಅಧ್ಯಕ್ಷರಾದ ಪ್ರದೀಲ್ಎ. ರೈ, ರೈ ಎಸ್ಟೇಟ್ ಕೋಡಿಂಬಾಡಿಯವರು ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ನಾಯಕ ಕೌಶಿಕ್ ಶೆಟ್ಟಿ, ಚಿಣ್ಣರ ಸಮಿತಿಯ  ಕಾರ್ಯದರ್ಶಿ ದಿಗಂತ್ ಡೆಕ್ಕಾಜೆ,ಉಪಾಧ್ಯಕ್ಷರಾದ  ಸಾನ್ವಿ ಕೆದಿಕಂಡೆ, ಶ್ರಾವಣಿ ಶೆಟ್ಟಿ ಕೆದಿಕಂಡೆಗುತ್ತು, ಶ್ರೇಯಾ ಡೆಕ್ಕಾಜೆ, ಮನಿಷ್ ಸೇಡಿಯಾಪು, ಶರಣ್ ಸೇಡಿಯಾಪು, ತಶ್ವಿತ್ ರಾಜ್ ಕೈಪಾ ಇವರುಗಳು ಉಪಸ್ಥಿತರಿದ್ದು,ಈ ಸಂದರ್ಭದಲ್ಲಿ ಸದಸ್ಯರುಗಳಾದ ಭವಿಷ್ಯ ಆಚಾರ್ಯ ಕೊಂಬಕೋಡಿ, ಶೃದಿ ರೈ, ಹನ್ಯಿಕ್ ಡೆಕ್ಕಾಜೆ, ವಿನಿಷ್ ಸೇಡಿಯಾಪು ಜೊತೆಗಿದ್ದರು.

ಪ್ರಚಾರ ಸಮಿತಿಯ ಸದಸ್ಯರಾದ ಶ್ರೀಮತಿ ರಶ್ಮಿಯನ್.ರೈ ಮಠಂತಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಡ್ಕ ಶಾಲೆಯ ವಿದ್ಯಾರ್ಥಿನಿ ಕು.ಕೀರ್ತಿ ಕಾರ್ಯಕ್ರಮವನ್ನು ನಿರೂಪಿಸಿ, ಕು.ಹರ್ಷಿಣಿ ಸ್ವಾಗತಿಸಿದರು. ಶ್ರೇಯಾ ಡೆಕ್ಕಾಜೆ ವಂದನಾರ್ಪನೆಗೈದರು. ಕಾರ್ಯಕ್ರಮದ ಕುರಿತು ಕು.ಸಿಂಧು ಅನಿಸಿಕೆಯನ್ನು ಹಂಚಿಕೊಂಡರು.

ಪೆರ್ನೆ ಗ್ರಾಮಪಂಚಾಯತ್ ಸದಸ್ಯರಾದ ನವೀನ್ ಕುಮಾರ್ ಪದಬರಿ, ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಾಲಾ ಶಿಕ್ಷಕಿಯಾರಾದ ಶ್ರೀಮತಿ ಸವಿತಾ ಪಿ.ಆರ್, ಶ್ರೀಮತಿ ವಿಶಾಲಾಕ್ಷೀ, ಗೌರವ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಟಿ.ಯಂ, ಕು.ಪ್ರಫುಲ್ಲ, ಶಾಲಾ ಎಸ್ ಡಿ ಎಂ ಸಿ  ಅಧ್ಯಕ್ಷರಾದ ಶ್ರೀಮತಿ ನಳಿನಿ, ಮಕ್ಕಳ ಪೋಷಕರಾದ ಶ್ರೀಮತಿ ವಿಮಲ, ಶ್ರೀಮತಿ ಗೀತಾ, ದೇವಳದ ಮಹಿಳಾ  ಸಮಿತಿಯ ಗೌರವ ಅಧ್ಯಕ್ಷರಾದ ಸುಮ ಅಶೋಕ್ ರೈ, ರೈ ಎಸ್ಟೇಟ್ ಕೋಡಿಂಬಾಡಿ, ಅಲಂಕಾರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸದಸ್ಯರಾದ ಯೋಗೀಶ್ ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಕವಿತಾ ಕೈಪಾ, ಚೈತನ್ಯ ಸೇಡಿಯಾಪು, ದೇವಳದ ವೈದಿಕ ಸಹಕಾರ ಸಮಿತಿಯ ಸಂಚಾಲಕರಾದ ವಿಜಯ ನಾಯ್ಕ ಲಿಂಗಪಾಲು, ಸಹ ಸಂಚಾಲಕರಾದ ದಿನೇಶ್ ಶೆಟ್ಟಿ ಪಿಜಿನಡ್ಕ, ಜಯಂತ ಗೌಡ ಪಿಲಿಗುಂಡ, ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಗಳಾದ ಶ್ರೀಮತಿ ಸುಂದರಿ, ಶ್ರೀಮತಿ ಗುಲಾಬಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.