ಶಾಂತಿಮೊಗರು : ದೇವಸ್ಥಾನಕ್ಕೆ ಸುಬ್ರಹ್ಮಣ್ಯ ಭಜನಾ ಮಂಡಳಿಯಿಂದ 1 ಲಕ್ಷ ನಗದು ದೇಣಿಗೆ

 

ಬೆಳಂದೂರು: ಬ್ರಹ್ಮಕಲಶದ ಸಿದ್ದತೆಯಲ್ಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಣ್ಯೇಶ್ವರ ದೇವಸ್ಥಾನದ ಹೊರಾಂಗಣದ ಮೇಲ್ಛಾವಣಿಗೆ ಶೀಟ್ ಅಳವಡಿಸುವ ಬಗ್ಗೆ ರೂ.1 ಲಕ್ಷ ನಗದನ್ನು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ನೇತೃತ್ವದಲ್ಲಿ ನಗರ ಭಜನಾ ಸಮಿತಿಯ ವತಿಯಿಂದ ನೀಡಲಾಯಿತು. ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ರಮೇಶ್ ನಡುಮನೆ,ನಗರ ಭಜನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಮಡಿವಾಳ,ಗೌರವಾಧ್ಯಕ್ಷ ಸೂರಪ್ಪ ಗೌಡ ಪಟ್ಟೆತ್ತಾನ,ಗೌರವ ಸಲಹೆಗಾರರಾದ ಭರತ್ ನಡುಮನೆ,ಪುಷ್ಪಲತಾ ಪಿ.ಗೌಡ ಕುದ್ಮಾರು, ಚಿದಾನಂದ ಕೆರೆನಾರು,ಶ್ರೀಧರ ಗೌಡ ಕೊಯಕ್ಕುಡೆ,ಚಂದ್ರ ಗೌಡ ತೆಕ್ಕಿತಡಿ,ರವಿ ಎರ್ಕಮೆ,ಹೇಮನಾಥ ನೂಜಿ,ಸೋಮಪ್ಪ ಗೌಡ ಅನ್ಯಾಡಿ ಹಾಗೂ ಸಮಿತಿ ಸದಸ್ಯರು ನಗದನ್ನು ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ,ದೇವಸ್ಥಾನದ ಪ್ರಧಾನ ಅರ್ಚಕ ರಮಾನಂದ ಭಟ್ ತೋಟಂತಿಲ,ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ ಅವರಿಗೆ ಹಸ್ತಾಂರಿಸಿದರು.

Leave A Reply

Your email address will not be published.