ಮಗಳ ಮದುವೆಯ ಕರೆಯೋಲೆ ನೀಡಿದ್ದ ಆಟೋ ಎಳೆಯುವವನ ಭೇಟಿಯಾದ ಪ್ರಧಾನಿ
ಒಂದು ಕಾಲದಲ್ಲಿ ಶ್ರೀಮಂತರ, ಸಿನಿಮಾ ನಟ-ನಟಿಯರಿಗೆ, ಮತ್ತು ಎಲೈಟ್ ವರ್ಗದವರಿಗೆ ಮಾತ್ರ ದೊರಕುತ್ತಿದ್ದ ದೇಶದ ದೊರೆ, ಈಗ ದೀನರ, ದಲಿತರ, ನೊಂದವರ ಮತ್ತು ಕೂಲಿ ಕೆಲಸದವರಿಗೆ ಕೂಡ ಲಭ್ಯವಾಗುತ್ತಿದ್ದಾರೆ. ಅದು ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ !
ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನೆ ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಬಂದಿದ್ದಾಗ ರಿಕ್ಷಾ ಎಳೆಯುವ ಮಂಗಲ್ ಕೇವತ್ ಅವರನ್ನು ಭೇಟಿಯಾಗಿದ್ದಾರೆ.
ಮಂಗಲ್ ಕೇವತ್ ಅವರು ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಖುದ್ದಾಗಿ ದೆಹಲಿಯ ಪ್ರಧಾನ ಮಂತ್ರಿ ಕಚೇರಿಗೆ ತೆರಳಿ ಇದೇ ತಿಂಗಳ 8 ರಂದು ನೀಡಿದ್ದರು. ತಮ್ಮ ಮಗಳ ಮದುವೆಯ ಕರೆಯೋಲೆಯ ಪ್ರಥಮ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ನೀಡುವುದು ಕೇವತ್ ಅವರ ಬಯಕೆಯಾಗಿತ್ತು.
ಮಂಗಲ್ ಕೇವತ್ ನೀಡಿದ ಮದುವೆಯ ಕರೆಲೆ ಪ್ರತಿಯಾಗಿ, ಆತನ ಮದುವೆಗೆ ಶುಭಾಶಯ ಕೋರಿ ಪ್ರಧಾನಮಂತ್ರಿಗಳು ಕುಟುಂಬಕ್ಕೆ ಪತ್ರ ಬರೆದಿದ್ದರು. ಆ ಪತ್ರ ಮದುವೆಯ ದಿನವೇ ಕುಟುಂಬದ ಕೈ ಸೇರಿದೆ.
ಈಗ ಪ್ರಧಾನಮಂತ್ರಿಗಳು ವಾರಣಾಸಿಯಲ್ಲಿ ಮಂಗಲ್ ಕೇವತ್ ಅವರನ್ನು ಖುದ್ದಾಗಿ ಭೇಟಿಯಾಗಿದ್ದಾರೆ ಮತ್ತು ಪ್ರಧಾನಮಂತ್ರಿ ಅವರಿಂದ ಪ್ರೇರಣೆಗೊಂಡು ಗಂಗಾನದಿಯ ಶುದ್ಧತೆಗೆ ಮಂಗಲ್ ಕೇವತ್ ತನ್ನದೇ ಆದ ಕೊಡುಗೆ ನೀಡಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು.
ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಭೇಟಿಯಾದುದನ್ನು ನೆನೆದು ಭಾವುಕರಾದ ಕೇವತ್, ಮೋದಿಯವರು ನಮ್ಮ ದೇವರು ಮತ್ತು ಗುರು ಎಂದಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿಯ ನಂತರ ತಮ್ಮಕುಟುಂಬದ ಕಡು ಬಡತನದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಆಶಾಭಾವನೆಯನ್ನು ಪತ್ನಿ ರೇಣು ಕೇವತ್ ಹೊಂದಿದ್ದಾರೆ.