ಐತಿಹಾಸಿಕ ಕಾಜೂರು ಉರೂಸ್ ಸಮಾಪನ : ಸಾವಿರಾರು ಜನರು ಭಾಗಿ

ಐತಿಹಾಸಿಕ ಕಾಜೂರು ಉರೂಸ್ : ಸಾವಿರಾರು ಜನರು ಭಾಗಿ

 

ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನ ಐತಿಹಾಸಿಕ ಉರೂಸ್ ಸಂಭ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ದರ್ಗಾಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ಕುರಾನ್ ಪಠಿಸಿ ತಮ್ಮ ಇಷ್ಟರ್ಥ ನೆರವೇರಲು ಹರಕೆ ರೂಪವಾಗಿ ಮಲ್ಲಿಗೆ ಹೂ ಹಾಗೂ ಚಾದರ ಅರ್ಪಿಸಿದರು.

ಕಳೆದ 8 ವರ್ಷಗಳ ಹಿಂದೆ ನಡೆದಿದ್ದ ಉರೂಸ್ ಬಳಿಕದ ದಿನಗಳಲ್ಲಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಉರೂಸ್ ಸಂಭ್ರಮಾಚರಣೆಗೆ ಊರ ಪರವೂರ ಮಂದಿ ಸಾಕ್ಷಿಯಾಗುವುದರೊಂದಿಗೆ ಹಬ್ಬದ ವಾತಾವರಕ್ಕೆ ಸಾಕ್ಷಿಯಾಯಿತು.

ಉರೂಸ್ ಪ್ರಯುಕ್ತ ಫೆ.7ರಿಂದ ಆರಂಭಗೊಂಡ ಸಾಮೂಹಿಕ ಸಂಭ್ರಮ ಫೆ.16ರವರೆಗೆ ನಿರಂತರವಾಗಿ ಹಗಲು ರಾತ್ರಿ ಧಾರ್ಮಿಕ ಪ್ರವಚನ ಸೇರಿದಂತೆ ಪ್ರಾರ್ಥನೆ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿದ್ದರು.

Leave A Reply

Your email address will not be published.