ಎಡಮಂಗಲ ದೇವಸ್ಥಾನ: ಮಹಾರಥೋತ್ಸವ

ಕಾಣಿಯೂರು : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.13ರಂದು ಜಾತ್ರೋತ್ಸವ ಆರಂಭವಾಗಿದ್ದು ಫೆ. 19 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ೫ ದಿನಗಳ ಉತ್ಸವಾದಿಗಳು ನಡೆಯಲಿದೆ.

ಇದರ ಅಂಗವಾಗಿ ಫೆ.16 ಬೆಳಗ್ಗೆ ಬಲಿ ಹೊರಟು ದೇವರ ಉತ್ಸವ ಬಲಿ,ಮಹಾರಥೋತ್ಸವ ,ಪಾಟಾಳಿ ಕಟ್ಟೆ ಪೂಜೆ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆ ಪೂಜೆ ನಂತರ ಮರೋಳಿ ಶ್ರೀ ಶಿರಾಡಿ ದೈವ ಮತ್ತು ಉದ್ರಾಂಡಿ ದೈವಗಳ ಓಲೆಸವಾರಿ ,ಮಹಾಪೂಜೆ ,ಪ್ರಸಾದ ವಿತರಣೆ,ಶ್ರೀ ಭೂತ ಬಲಿ ಮತ್ತು ಶ್ರೀ ದೇವರ ಶಯನೋತ್ಸವ ನಡೆಯಿತು.

ಫೆ.13 ರಂದು ರಾತ್ರಿ ಧ್ವಜಾರೋಹಣ ,ಬಲಿಹೊರಟು ಉತ್ಸವ ,ಶ್ರೀ ರಂಗಪೂಜೆ ,ಮಹಾಪೂಜೆ ,ಪ್ರಸಾದ ವಿತರಣೆ ನಡೆಯಿತು ಫೆ.14 ರಂದು ರಾತ್ರಿ ಬಲಿ ಹೊರಟು ಉತ್ಸವ ,ಹೊಸಮಜಲು ಕಟ್ಟೆಪೂಜೆ .ಭೂತ ಬಲಿ ,ಶ್ರೀ ಮಹಾಲಿಂಗರಾಯ ದೈವದ ಭಂಡಾರ ಬಂದು ದೈವದ ಓಲೆ ಸವಾರಿ ಯ ಬಳಿಕ ರಾತ್ರಿ ಶ್ರೀ ನೇಲ್ಯಾರು ನೇಮ ಹಾಗೂ ಉಳ್ಳಾಲ್ತಿ ನೇಮ ನಡೆಯಿತು.

ಮಹಾರಥೋತ್ಸವ

ಫೆ.15ರಂದು ಬೆಳಗ್ಗೆ ಬಲಿ ಹೊರಟು ಉತ್ಸವ ,ಶ್ರೀ ದೇವರ ದರ್ಶನ ಬಲಿ ,ಬಟ್ಟಲು ಕಾಣಿಕೆ ,ಮಹಾ ಪೂಜೆ ನಡೆಯಿತು.

ಮಹಾರಥೋತ್ಸವ

ಫೆ.16 ಬೆಳಗ್ಗೆ ಬಲಿ ಹೊರಟು ದೇವರ ಉತ್ಸವ ಬಲಿ,ಮಹಾರಥೋತ್ಸವ ,ಪಾಟಾಳಿ ಕಟ್ಟೆ ಪೂಜೆ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಕಟ್ಟೆ ಪೂಜೆ ನಂತರ ಮರೋಳಿ ಶ್ರೀ ಶಿರಾಡಿ ದೈವ ಮತ್ತು ಉದ್ರಾಂಡಿ ದೈವಗಳ ಓಲೆಸವಾರಿ ,ಮಹಾಪೂಜೆ ,ಪ್ರಸಾದ ವಿತರಣೆ,ಶ್ರೀ ಭೂತ ಬಲಿ ಮತ್ತು ಶ್ರೀ ದೇವರ ಶಯನೋತ್ಸವ ನಡೆಯಿತು.

ಇಂದು ನೇಮೋತ್ಸವ

ಫೆ.17 ರಂದು ಬೆಳಗ್ಗೆ ಕವಾಟೋದ್ಘಾಟನೆ ತೈಲಾಭಿಷೇಕ ,ಪಂಚಾಮೃತಾಭಿಷೇಕ ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ ಮಿತ್ತೂರು ನಾಯರ್ ದೈವದ ನೇಮ ನಡೆಯಲಿದೆ.ರಾತ್ರಿ ಶ್ರೀದೇವರ ಉತ್ಸವ, ಕುಮಾರಧಾರ ಭಂಡಾರಗಯದಲ್ಲಿ ಅವಭೃತ ಸ್ನಾನ ಧ್ವಜಾವರೋಹಣ ನಡೆಯಲಿದೆ. ಫೆ.18 ರಂದು ಮಹಾಪೂಜೆ ,ಮಂತ್ರಾಕ್ಷತೆ ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.ಫೆ.19ರಂದು ಬೆಳಗ್ಗೆ ಮರೋಳಿ ಶಿರಾಡಿ ರಾಜನ್ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ ನಡೆಯಲಿದೆ.

Leave A Reply

Your email address will not be published.