ಉಳತ್ತೋಡಿ ಶ್ರೀ ಷಣ್ಮುಖ ದೇವಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 10.00 ಲಕ್ಷ ದೇಣಿಗೆ

ಹಿರೇಬಂಡಾಡಿ: ಜೀರ್ಣೋದ್ಧಾರಗೊಂಡು ಬೃಹ್ಮಕಲಶೋತ್ಸವ ನಡೆಯಲಿರುವ ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬೃಹ್ಮಕಲಶೋತ್ಸವದ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ದೇವಳಕ್ಕೆ ರೂ 10.00. ಲಕ್ಷ ದೇಣಿಗೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃಧ್ದಿ ಯೋಜನೆಯ ಯೋಜನಾಧಿಕಾರಿ ಜನಾರ್ದನ, ಸಮುದಾಯ ಅಭಿವೃದ್ಧಿ ವಿಭಾಗದ ಪುಷ್ಪರಾಜ, ವಲಯ ಮೇಲ್ವಿಚಾರಕ ರವಿ, ಸೇವಾ ಪ್ರತಿನಿಧಿಗಳಾದ ಜಯಶ್ರೀ, ಕು.ಚಂದ್ರಾವತಿ ಹಾಗು ಯೋಜನೆಯ ಸದಸ್ಯರುಗಳು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ದೇವಪ್ಪ ಪೂಜಾರಿ ಪಡ್ಪು , ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜನಾರ್ದನ ಗೌಡ ಸಾಂತಿತ್ತಡ್ಡ, ಬೃಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಗಣೇಶ್ ಮಠಂದೂರು,ಪ್ರಧಾನ ಆರ್ಚಕರಾದ ಗೋಪಾಲಕೃಷ್ಣ ತೋಳ್ಳಾಡಿ ಹಾಗೂ ವಿವಿಧ ಸಮಿತಿಯ ಸಂಚಾಲಕರಾದ ಚೆನ್ನಕೇಶವ ಕನ್ಯಾನ, ಗಂಗಾಧರ ಬಾರ್ಲ, ನಾರಾಯಣ ಕನ್ಯಾನ, ಬಾಲಚಂದ್ರ ಗುಂಡ್ಯ, ಹರೀಶ್ ಪಲ್ಲೆಜಾಲು, ಪ್ರಸಾದ್ ಪಲ್ಲೆಜಾಲು,ಲಕ್ಷೀಶ ನಿಡ್ಡೆಂಕಿ,ರೋಹಿತ್ ಸರೋಳಿ,ವಿದ್ಯಾ ನಿಡ್ಡೆಂಕಿ,ಮಾಧವ ನಾಯ್ಕ ಗುಂಡಿಗದ್ದೆ,ಬೂದಪ್ಪ ಕಾಯೆರ್ತಡಿ, ಸೇಷಪ್ಪ ನೆಕ್ಕಿಲು, ಜನಾರ್ದನ ಹೊಸಮನೆ,ಶೇಖರ ನಿಡ್ಡೆಂಕಿ, ಹೊನ್ನಪ್ಪ ಕುಬಲ,ರಾಮಣ್ಣ ಉದ್ದಬಳ್ಳಿ, ನಂದಕುಮಾರ್ ಕೊಡಪಟ್ಯ,ಪ್ರಸಾದ್ ಶೆಟ್ಟಿ ಪೆರಾಬೆ, ರಾಮಕೃಷ್ಣ ಹೊಸಮನೆ, ವೆಬ್ಸೈಟ್ ರಚನೆಕಾರ ಯತೀಶ್ ವಳಕಡಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಧಾರ್ಮಿಕ ಸಭಾ ಸಂಚಾಲಕರಾದ ಅಶೋಕ್ ಕುಮಾರ್ ಪಡ್ಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೃಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀನ್ ಪಡ್ಪು ವಂದಿಸಿದರು.