ದೇಶಕ್ಕಾಗಿ ಮಡಿದ ಸೈನಿಕ ಗುರುವಿನ ಪತ್ನಿಯ ದೇಶ ದ್ರೋಹದ ವರ್ತನೆ | ಪತಿಯ ದುಡ್ಡು ಬೇಕು,ಪತಿಯ ನೆನಪು ಬೇಡ !!
ಮಂಡ್ಯದ ಮದ್ದೂರಿನಿಂದ ಮನಸ್ಸು ನೋಯುವಂತಹ ಸುದ್ದಿ ಬಂದಿದೆ.
ಮೊನ್ನೆ ಫೆಬ್ರವರಿ 14 ರಂದು ಆ ದಿನ ಪುಲ್ವಾಮಾ ದಾಳಿಯಲ್ಲಿ ಹತನಾದ ಗುರುವಿನ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಪೂಜೆ ಮತ್ತು ಸ್ಮರಣ ಕಾರ್ಯಕ್ರಮವನ್ನು ಆತನ ಗೆಳೆಯರು ಮತ್ತು ಕುಟುಂಬಸ್ಥರು ಇಟ್ಟುಕೊಂಡಿದ್ದರು. ಆದರೆ ದುರದಷ್ಟವಶಾತ್ ಹುತಾತ್ಮ ಗುರುವಿನ ಪತ್ನಿ ಅಲ್ಲಿಗೆ ಬರಲಿಲ್ಲ !
ಅವತ್ತು ಪುಲ್ವಾಮ ದಾಳಿಯಲ್ಲಿ ನಲ್ವತ್ತು ಸೈನಿಕರಲ್ಲಿ ಒಬ್ಬನಾಗಿ ತೀರಿಕೊಂಡಾಗ ಇಡೀ ರಾಜ್ಯ ಆತನ ಸಾವಿಗೆ ಮರುಗಿತ್ತು. ಅದಕ್ಕಿಂತ ಹೆಚ್ಚೇ ಅನ್ನುವಂತೆ ಇಡೀ ರಾಜ್ಯ ಸ್ಪಂದಿಸಿ ಒಟ್ಟು 15 ಕೋಟಿಗಳಷ್ಟು ದುಡ್ಡನ್ನು ಕುಟುಂಬದ ಕೈಗಿಟ್ಟು ಸಾಂತ್ವನ ಹೇಳಿತ್ತು. ಅಂಬರೀಶ್ ಪತ್ನಿ ಸುಮಲತಾ 20 ಗುಂಟೆ ಜಮೀನು ಕೊಟ್ಟಿದ್ದರು.
ಆದರೆ ಚಿತೆಯ ಬೆಂಕಿ ಆರುವ ಮುನ್ನವೇ ಬಂದ ದುಡ್ಡಿಗಾಗಿ ಕುಟುಂಬದಲ್ಲಿ ಸಣ್ಣಗೆ ಕಲಹ ಶುರುವಾಗಿತ್ತು. ವಾರ ಕಳೆಯುವುದರೊಳಗಾಗಿ ಜಗಳ ಬೀದಿಗೆ ಬಂದಿತ್ತು. ಈ ಮಧ್ಯೆ ಗುರುವಿನ ತಮ್ಮ ಗುರುವಿನ ಪತ್ನಿಯನ್ನು ಮದುವೆಯಾಗುವ ಪ್ರಪೋಸಲ್ ಕೂಡ ಕುಟುಂಬದಿಂದ ಬಂದಿತ್ತು. ಆದರೆ ಗುರುವಿನ ಪತ್ನಿ ಅದಕ್ಕೆ ಒಪ್ಪಿರಲಿಲ್ಲ.
ಆನಂತರ ಕುಟುಂಬದೊಳಗೆ ಹೇಗೆಲ್ಲಾ ದುಡ್ಡು ಹಂಚಿಕೆಯಾಗಿದೆ ಎಂದು ಯಾರಿಗೂ ತಿಳಿದಿಲ್ಲ. ಮೇಲ್ನೋಟಕ್ಕೆ ಗುರುವಿನ ಕುಟುಂಬ ತಮ್ಮ ಎಂದಿನ ಹಳ್ಳಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಗುರುವಿನ ಅಪ್ಪ ಇವತ್ತಿಗೂ ಇಸ್ತ್ರಿ ಮಾಡಿದ ದುಡ್ಡಲ್ಲಿ ಜೀವನ ನಡೆಸುತ್ತಿದ್ದಾರೆ.
ಹಿಂದೆ ಹಣದ ವಿಚಾರವಾಗಿ ನಡೆದ ಜಗಳವನ್ನು ಈಗ ಕುಟುಂಬದ ಮುಂದೆ ಪ್ರಸ್ತಾಪಿಸಿದರೆ ” ಹಾಗೇನೂ ವ್ಯಾಜ್ಯವಿಲ್ಲ, ನಮ್ಮ ಪಾಲು ನಮಗೆ ಬಂದಿದೆ ; ಅವಳ ಪಾಲು ಅವಳು ತೆಗೆದುಕೊಂಡಿದ್ದಾಳೆ ” ಎನ್ನುತ್ತಾರೆ.
ದ್ರೋಹಿಗಳಿದ್ದಾರೆ ಸರಿಸಿ ಬಿಡಿ
ಏನೇ ಇರಲಿ ಇವತ್ತು ಗುರುವಿನ ಪತ್ನಿಯ ನಡವಳಿಕೆಯನ್ನು ನಾವು ಉಗ್ರವಾಗಿ ಪ್ರತಿಭಟಿಸಬೇಕು. ಆಕೆಯೇನೋ ತಾನೇ ಬೆಂಗಳೂರಿನಲ್ಲಿ ಪತಿಯ ವರ್ಷಾ೦ತಿಕ ನಡೆಸಲು ನಿರ್ಧರಿಸಿದ್ದೆವು ಎಂದು ಸಬೂಬು ಹೇಳುತ್ತಿದ್ದಾಳೆ. ಸುದ್ದಿಯೆಲ್ಲ ಮಾಧ್ಯಮಗಳಲ್ಲಿ ನಂತರ ನಿನ್ನೆ ಗುರುವಿನ ಸಮಾಧಿಗೆ ತೆರಳಿ ಪೂಜೆ ಮಾಡಿದ್ದಾಳೆ. ಗೋಳಾಡಿದ್ದಾಳೆ. ಪತಿಯ ನೆನಪಲ್ಲೇ ಬದುಕುತ್ತಿದ್ದೇನೆ ಎಂದಿದ್ದಾಳೆ. ಒಂದುವೇಳೆ ಪತಿಯ ಬಗ್ಗೆ ಆ ಮಟ್ಟಿಗಿನ ನೆನಪಿದ್ದಿದ್ದರೆ, ತೀರಿಕೊಂಡ ದಿನವೇ ಬಂದಿರುತ್ತಿದ್ದಳು !
ಗುರು ಹುತಾತ್ಮನಾಗಿ ಇದು ಮೊದಲ ವರ್ಷವಷ್ಟೇ. ಆ ದಿನ ದೇಶವಾಸಿಗಳು ಸ್ಪಂದಿಸಿ ಎತ್ತಿ ಕೊಟ್ಟ ದುಡ್ಡು – ಅದು ಸುಮ್ಮನೆ ಕೊಟ್ಟಿಲ್ಲ. ಆ ದುಡ್ಡು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಗುರುವಿನ ದುಡ್ಡು. ಅದರ ಪೂರ್ತಿ ಹಕ್ಕು ಗುರುವಿಗೆ ಇದೆ. ಆತ ಇವತ್ತು ದೈಹಿಕವಾಗಿ ಬದುಕಿಲ್ಲದೆ ಇರಬಹುದು. ಆದರೆ ಆತನ ಹೆಸರಿನಲ್ಲಿ ಕೊಟ್ಟ ಪ್ರತಿ ಪೈಸೆಯ ಮೇಲೂ ಆತನ ಹಕ್ಕಿದೆ. ಗುರುವೇ ಬೇಡವೆಂದು ಧಿಕ್ಕರಿಸಿದ ಯಾರೇ ಆಗಲಿ- ಪತ್ನಿಯಾಗಲಿ, ಕುಟುಂಬಸ್ಥರಾಗಲಿ ಯಾರಿಗೂ ಆ ದುಡ್ಡಿನಲ್ಲಿ ಒಂದು ಪೈಸೆಯನ್ನೂ ಅನುಭವಿಸುವ ಹಕ್ಕಿಲ್ಲ.
ಧಿಕ್ಕಾರವಿದೆ ಗುರುವಿನ ಪತ್ನಿಯ ಈ ಮನಸ್ಸತ್ವಕ್ಕೆ. ಗುರುವಿನ ಕುಟುಂಬಕ್ಕೆ ಹಣಕಾಸಿನ ಸಹಾಯ ನೀಡಿದವರೆಲ್ಲೂ ಆಕೆಯನ್ನು ಪ್ರಶ್ನಿಸಬೇಕು. ಗುರುವಿನ ಪತ್ನಿಯ ಮನೆ ಮುಂದೆ ಪ್ರತಿಭಟನೆ ನಡೆಯಲೇ ಬೇಕು. ಗಡಿಕಾಯುತ್ತಿರುವ ಯೋಧನ ಬಗ್ಗೆ ಮತ್ತು ಒಂದು ವೇಳೆ ಆತ ತೀರಿಕೊಂಡರೆ ಆತನ ಮೇಲೆ ಮಾತ್ರ ನಮ್ಮ ಕಾಳಜಿ ಇದ್ದರೆ ಸಾಲದು. ಒಂದು ವೇಳೆ ಆತ ಸತ್ತಾಗ ಆತನ ಹೆಸರಿನಲ್ಲಿ ಮಜಾ ಮಾಡಬಯಸುವ ಇಂತಹಾ ಜನರು ದೇಶದ್ರೋಹಿಗಳಿಗೆ ಸಮ.
ಧಿಕ್ಕಾರ ಧಿಕ್ಕಾರ…..ಈ ಕೂಗು ಆಕೆಯ ಮನೆಗೂ ತಲುಪಲಿ ಎಂಬುದೇ ನಮ್ಮ ಆಶಯ.