ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ,ಬೆಳ್ಳಾರೆ ಬೆಡಿ
ಇಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ,ಬೆಳ್ಳಾರೆ ಬೆಡಿ
ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರ ವರೆಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಫೆ.16ರಂದು ಬೆಳಿಗ್ಗೆ ಗಣಪತಿ ಹವನ,ಉಷಾ ಪೂಜೆ, ಶಿವೇಲಿ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಶಿವೇಲಿ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭೂತ ಬಲಿ,ಸೇವೆ ಸುತ್ತು,ಪೇಟೆ ಸವಾರಿ,(ಪಳ್ಳಿ ಬೇಟೆ) ಸಿಡಿಮದ್ದು ಪ್ರದರ್ಶನ ನಡೆಯಿತು.ರಾತ್ರಿ ಪೂಜೆ ನಡೆದು ಶಯನ ,ಕವಾಟ ಬಂಧನ ನಡೆಯಿತು.
ಜಾತ್ರೋತ್ಸವದ ಅಂಗವಾಗಿ ಫೆ.13 ರಂದು ಉಗ್ರಾಣ ಮುಹೂರ್ತ, ತಂತ್ರಿಗಳ ಆಗಮನ,ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ಯ ಬಳಿಕ ಧ್ವಜಾರೋಹಣ, ಬಯನ ಬಲಿ ,ರಾತ್ರಿ ಪೂಜೆ,ನೃತ್ಯ ಬಲಿ ನಡೆಯಿತು. ಫೆ.14 ರಂದು ಬೆಳಿಗ್ಗೆ ಗಣಪತಿ ಹೋಮ,ಉಷಾ ಪೂಜೆ, ಶಿವೇಲಿ, ನವಕ ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ,ಶಿವೇಲಿ,ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮ
ಕೃಷ್ಣ ಕಾಟುಕುಕ್ಕೆ ಮತ್ತು ಬಳಗದಿಂದ ದಾಸ ಭಕ್ತಿ ಗಾನಾಮೃತ ನಡೆಯಿತು.
ರಾತ್ರಿ ಶಿವೇಲಿ,ದರ್ಶನ ಬಲಿ ,ಮಹಾಪೂಜೆ,ಪ್ರಸಾದ ವಿತರಣೆ ನಡೆಯಿತು. ಫೆ.15ರಂದು ಬೆಳಿಗ್ಗೆ ಗಣಪತಿ ಹೋಮ,ಉಷಾ ಪೂಜೆ,ಶಿವೇಲಿ ನವಕ ಕಲಶಾಭಿಷೇಕ,ಮದ್ಯಾಹ್ನ ಮಹಾಪೂಜೆ,ಶಿವೇಲಿ ಅನ್ನಸಂತರ್ಪಣೆ ನಡೆದಿದೆ.
ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ. ಪೂಜಾಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಸದಸ್ಯರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಿಠಲದಾಸ್ ಎನ್.ಎಸ್.ಡಿ, ಜಯರಾಮ ಉಮಿಕ್ಕಳ,ಜನಾರ್ಧನ ಗೌರಿಹೊಳೆ,ನಾಗೇಶ್ ಕುಲಾಲ್ ತಡಗಜೆ,ಗುಣವತಿ ಶೆಟ್ಟಿ ಮಂಡೆಪು,ಶಶಿಕಲಾ ರೈ ಚಾವಡಿಬಾಗಿಲು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು. ಸಮಿತಿ ಸದಸ್ಯರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.