ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್

Share the Article

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್

ಪುತ್ತೂರು: ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾಗಿ ಪಡೆದು ಕೊಂಡ ಬಹುಮಾನದ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡುವ ಮೂಲಕ ಪುತ್ತೂರಿನ ಮೆಸ್ಕಾಂ ಮೀಟರ್ ರೀಡರ್ಸ್ ತಂಡ ಮಾನವೀಯ ಕಾರ್ಯಮಾಡಿದೆ.

ಪುತ್ತೂರಿನಲ್ಲಿ ನಡೆದ ಮೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಲ್ ಪುತ್ತೂರು ವಿಭಾಗೀಯ ಮಟ್ಟದ ಲೀಗ್ ಮಾದರಿಯ ಮೆಸ್ಕಾಂ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಜಗದೀಶ್ ಮಾಲಕತ್ವದ ಪುತ್ತೂರು ಮೀಟರ್ ರೀಡರ್ಸ್ ಅವರ M.R.Lions ತಂಡ ದ್ವಿತೀಯ ಬಹುಮಾನ ಗಳಿಸಿತ್ತು. ಈ ಬಹುಮಾನದಲ್ಲಿ ಸಿಕ್ಕ ಹಣದಲ್ಲಿ ತಂಡದ ಆಟಗಾರರು ಬನ್ನೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ಞಾ ಮಾನಸಿಕ ವಿಶೇಷ ಚೇತನರ ವಸತಿ ಕೇಂದ್ರಕ್ಕೆ ಹಣ್ಣು ಹಂಪಲು ಸೇರಿದಂತೆ ಇತರ ವಸ್ತುಗಳನ್ನು ನೀಡಿದ್ದಾರೆ. ಟೀಮ್ ಮೀಟರ್ ರೀಡರ್ಸ್‌ನ ಆಟಗಾರರ ಸಾಮಾಜಿಕ ಕಳಕಳಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ತಂಡದ ಮಾಲಕ ಜಗದೀಶ್, ವ್ಯವಸ್ಥಾಪಕ ಅಕ್ಷಯ್ ಶೆಟ್ಟಿ, ನಾಯಕ ಮಾಧವ ಬಿ, ಉಪನಾಯಕ ಚಿದಾನಂದ ಕೆ, ಸದಸ್ಯರಾದ ಚಿದಾನಂದ,ಹರೀಶ.ಪಿ,ಸಂದೇಶ್ ಶೆಟ್ಟಿ,ರೂಪೇಶ್.ಕೆ, ಹರಿಶ್ಚಂದ್ರ.ಎಂ, ರವೀಶ ಕುಮಾರ್, ವಿನೋದ್ ಕುಮಾರ್, ಸುಜಿತ್ ಕುಮಾರ್, ಚರಣರಾಜ್, ಮನೋಜ್.ಎಸ್, ದೀಕ್ಷಿತ್.ಎ.ಎನ್. ಮತ್ತು ಕೇಶವರವರು ‘ಪ್ರಜ್ಞಾ’ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಕೊಡುಗೆ ನೀಡಿದ್ದಾರೆ.

Leave A Reply

Your email address will not be published.