ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!

ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!

ಅರಿಯಡ್ಕ:‌ ಕೋರಂ ಕೊರತೆಯಿಂದಾಗಿ ಫೆ. 14 ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಬೇಕಾಗಿದ್ದ ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ಮಹಾಸಭೆಯು ಮುಂದೂಡಲ್ಪಟ್ಟಿದೆ. 2019-20ನೇ‌ ಸಾಲಿನ ಮಹಾಸಭೆಯನ್ನು ಜ.29ರಂದು ನಡೆಸುವುದಾಗಿ‌ ತೀರ್ಮಾನಿಸಿ‌ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಮಹಾಸಭೆ ಆಯೋಜನೆ ಮಾಡಲಾಗಿತ್ತು.‌ ಆ ದಿನವೂ ಸದಸ್ಯರ ಗೈರು ಹಾಜರಿಯಿಂದ‌ ಕೋರಂ ಕೊರತೆಯಿಂದಾಗಿ ಸಭೆ ನಡೆಸಲು ಅಸಾಧ್ಯವಾಗಿತ್ತು. ಅಂದು ಸಭೆ ನಡೆಯದ ಕಾರಣಕ್ಕಾಗಿ ಸಭೆಯನ್ನು ಫೆ.14ಕ್ಕೆ ಮುಂದೂಡಲಾಗಿತ್ತು. ಈ ಬಾರಿಯೂ ಕೋರಂ ಕೊರತೆಯಿಂದಾಗಿ ಮಹಾಸಭೆಯನ್ನು ಎರಡನೇ ಬಾರಿಗೆ ಮುಂದೂಡಲ್ಪಟ್ಟಿದೆ.ಮುಂದಿನ ಫೆ.29ರಂದು ಮಹಾಸಭೆ ನಡೆಸಲಾಗುವುದು ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ‌ ತಿಳಿಸಿದರು.

ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯಿಂದ ಶೌಚಾಲಯ ನಿರ್ಮಾಣ,ಅನ್ನಛತ್ರ‌ ಮೊದಲಾದ ಸಾಮಾಜಿಕ ಕಾರ್ಯಕ್ರಮ ನಡೆಸಲಾಗಿದೆ.ಇದರಿಂದಾಗಿ ಗ್ರಾಮ ಅರಣ್ಯ ಸಮಿತಿ ವಿಶೇಷ ಗೌರವವನ್ನು ಪಡೆದಿತ್ತು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಗ್ರಾಮ ಅರಣ್ಯ ಸಮಿತಿಗಳು (ವಿ.ಎಫ್.ಸಿ)

ಗ್ರಾಮ ಅರಣ್ಯ ಸಮಿತಿಗಳ ರಚನೆ ಗ್ರಾಮದ ಭಾಗಕ್ಕೆ, ಗ್ರಾಮವೊಂದಕ್ಕೆ ಅಥವಾ ಆಯ್ದ ಗ್ರಾಮಗಳ ಗುಂಪಿಗೆ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗುವುದು. ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಯಲ್ಲಿರುವ ಹಾಗೂ ಅರಣ್ಯ ಸಂರಕ್ಷಣೆ, ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವ ಪ್ರತಿ ವಯಸ್ಕ ಸದಸ್ಯನು ಗ್ರಾಮ ಅರಣ್ಯ ಸಮಿತಿಯ ಸಾಮಾನ್ಯ ಸಭೆಯ ಸದಸ್ಯನಾಗಲು ಅರ್ಹನಾಗಿರುತ್ತಾನೆ. 2/- ರೂಪಾಯಿಗಳನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಸಂದಾಯಮಾಡಿ ಆತನು/ಆಕೆಯು ತನ್ನನ್ನು ಗ್ರಾಮ ಅರಣ್ಯ ಸಮಿತಿಯ ಸದಸ್ಯನಾಗಿ/ಳಾಗಿ ನೋಂದಾಯಿಸಿಕೊಳ್ಳಬಹುದು. ಗ್ರಾಮ ಅರಣ್ಯ ಸಮಿತಿಗಳ ಸ್ಥಾಪನೆ ಗ್ರಾಮ ಅರಣ್ಯ ಸಮಿತಿಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ, ಜೆಎಫ್ಪಿಎಂ ಯೋಜನೆಯಲ್ಲಿ ಪಲ್ಗೊಳ್ಳಲು ಆಸಕ್ತಿ ಹೊಂದಿರುವ ಗ್ರಾಮಸ್ಥರು ಕೆಲವು ಪ್ರವರ್ತಕರನ್ನು ನೇಮಿಸಿಕೊಳ್ಳಬಹುದು. ಪ್ರವರ್ತಕರುಗಳು ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳನ್ನು (ಆರ್ಎಫ್ಓ) ಸಂಪರ್ಕಿಸಬೇಕು ಹಾಗೂ ಆಸಕ್ತ ಗ್ರಾಮಸ್ಥರ ಪಟ್ಟಿಯೊಂದಿಗೆ ಜೆಎಫ್ಪಿಎಂ ಕಾರ್ಯಕ್ರಮದಲ್ಲಿ ಭಾಗವಹಿಸುವ ತಮ್ಮ ಉದ್ದೇಶವನ್ನು ಘೋಷಣೆ ಮಾಡಬೇಕು.

ಗ್ರಾಮ ಅರಣ್ಯ ಸಮಿತಿಯನ್ನು ಕ್ರಮವಾದ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳು (ಪ್ರಾಂತೀಯ) ಕರ್ನಾಟಕ ಅರಣ್ಯ ಕಾಯಿದೆಯ ಅಡಿಯಲ್ಲಿ ಸಂಘಗಳಾಗಿ ನೋಂದಾಯಿಸುತ್ತಾರೆ.

ಗ್ರಾಮ ಅರಣ್ಯ ಸಮಿತಿಯ ಆಡಳಿತ ಮಂಡಳಿ

ಗ್ರಾಮ ಅರಣ್ಯ ಸಮಿತಿಯ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ನಡೆಸಲು ಪ್ರತಿ ನೋಂದಾಯಿತ ಗ್ರಾಮ ಅರಣ್ಯ ಸಮಿತಿಗೆ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ಇರುತ್ತದೆ. ಜೆಎಫ್ಪಿಎಂ ಕಾರ್ಯವಿಧಾನಕ್ಕೆ ಬದ್ಧರಾಗಿರುವ, ಸಮುದಾಯದಲ್ಲಿ ಒಂದು ಹಂತದ ಗೌರವ, ನಂಬಿಕೆ ಹಾಗೂ ವಿಶ್ವಾಸಾರ್ಹತೆ ಹೊಂದಿರುವ ಹಾಗೂ ಗ್ರಾಮ ಅರಣ್ಯ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ತಮ್ಮ ಸಮಯ ಮೀಸಲಿಡಲು ಇಚ್ಛಿಸುವ ವ್ಯಕ್ತಿಗಳು ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ. ಅವರು ಗ್ರಾಮ ಅರಣ್ಯ ಸಮಿತಿಯ ಸದಸ್ಯರುಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತಾರೆ ಹಾಗೂ ಗ್ರಾಮ ಅರಣ್ಯ ಸಮಿತಿಯ ಸೂಕ್ತ ಆಡಳಿತಕ್ಕೆ ಹಾಗೂ ಕ್ರಿಯಾಶೀಲ ಕಾರ್ಯಾಚರಣೆಗೆ ಜವಾಬ್ದಾರರಾಗಿರುತ್ತಾರೆ.

Leave a Reply

error: Content is protected !!
Scroll to Top
%d bloggers like this: