ಬಡ ಶ್ರಮಿಕರಿಗೆ ಕೂಲಿಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ । ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮದ ಮನವಿ

ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ ಸ್ವಸ್ಥ ಭಾರತ- ಸೇವಾಶ್ರಮ ಎಂಬ ಸಂಘಟನೆಯನ್ನು ಕಟ್ಟಿಕೊಂಡ ಉತ್ಸಾಹಿ ತಂಡವೊಂದು ದಕ್ಷಿಣಕನ್ನಡಲ್ಲಿ ಬಡವರು, ಕೂಲಿಕಾರ್ಮಿಕರು, ಶ್ರಮಿಕರು ಮತ್ತಿತರರು ಅನುಭವಿಸುತ್ತಿರುವ ಅನುಭವಿಸಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದನ್ನು ತಾಲೂಕಿನ ಎಲ್ಲ ಶಾಶಕರು, ಜಿಲ್ಲೆಯ ಸ೦ಸದರು ಮತ್ತು ಉಸ್ತುವಾರಿ ಮಂತ್ರಿಗಳಿಗೆ ತಲುಪಿಸಿದ್ದಾರೆ.

ಸ್ವಸ್ಥ ಭಾರತ ನಿರ್ಮಾಣ ಮಾಡಬೇಕೆನ್ನುವ ಬಯಕೆಯಿಂದ ಹೊರಟ ಸ್ವಯಂಸೇವಕರಾಗಿ ಈ ಮನವಿ.
1) ಈ ಬೆಂಗಾಳಿ ಉತ್ತರಪ್ರದೇಶದವರೆಂದು ಹೇಳಿಕೊಂಡು ಕಡಿಮೆ ಸಂಬಳದಲ್ಲಿ ಕಟ್ಟಡ ಕೆಲಸ ಮನೆಕೆಲಸ ಮತ್ತು ದಿನ ಕೂಲಿ ಕೆಲಸ ಮಾಡುತ್ತಿರುವವರಿಂದಾಗಿ ನಿಮಗೆ ಮತದಾನ ಮಾಡಿ ಗೆಲ್ಲಿಸಿದ (ಮತದಾರ) ಮೂಲ ನಿವಾಸಿಗರಿಗೆ ಕೆಲಸವೇ ಇಲ್ಲದೇ ಪರದಾಡುವ ಪರಿಸ್ಥಿತಿ ಬಂದಿದೆ.
2) ಇವರು ನಿಜವಾಗಿಯು ಬೆಂಗಾಳಿಗರೆ ಉತ್ತರಪ್ರದೇಶದವರೆ ಅಥವಾ ಬಾಂಗ್ಲಾದೇಶದಿಂದ ಬಂದ ವಿದೇಶಿಗರೆ ಇದನ್ನು ಪರಿಶಿಲಿಸಿ ಈಮಣ್ಣಿನಲ್ಲಿ ಹುಟ್ಟಿ ಬೆಳೆದು ಸರಕಾರಕ್ಕೆ ತೆರಿಗೆ ಪಾವತಿ ಮಾಡಿ ದುಡಿಯುವವರಿಗೆ ಸಹಾಯಮಾಡಿ.
3) ತೆರಿಗೆ ಕಟ್ಟದೇ ಯಾವುದೇ ದಾಖಲೆ ಇಲ್ಲಾದೆ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವವರ ವಿರುದ್ದ ಮತ್ತು ಇಂತಹ ಅನ್ಯ ರಾಜ್ಯದ ಮತ್ತು ಅನ್ಯದೇಶಿಯರನ್ನು ಕರೆದುಕೊಂಡು ಬರುವವರ ವಿರುದ್ದವು ಕಠಿಣ ಕಾನೂನು ಕ್ರಮ ಜರುಗಿಸಿ.
4) ಈ ಕೂಡಲೆ ಜಾರಿಯಾಗುವಂತೆ ಅಕ್ರಮ ವಲಸೆ ಬಂದವರನ್ನು ಒರದಬ್ಬುವ ಕಾರ್ಯಕ್ಕೆ ಚಾಲನೆ ನೀಡುವುದು.
5) ಹಿಂದಿ ಭಾಷಿಕರೆಂದು ಹೇಳಿಕೊಂಡು ಕಡಿಮೆ ಸಂಭಳದಲ್ಲಿ ಗಾರೆ,ಕಟ್ಟಡ ಕೆಲಸ ,ಮನೆ ಕೆಲಸಕ್ಕೆ ಬರುವವರನ್ನು ಶೀಘ್ರ ವಿಚಾರಿಸಿ ಮತ್ತು ಅಂತವರನ್ನು ಕೆಲಸಕ್ಕೆ ಕರೆದುಕೊಂಡು ಬರುವವರ ಹಾಗೂ ಕೆಲಸಕ್ಕೆ ನಿಲ್ಲಿಸಿದವರ ವಿರುದ್ದವೂ ಕಾನೂನು ಕ್ರಮಕೈಗೊಳ್ಳುವುದು.
6) ಈ ಗುರುತಿಸು ವಕಾರ್ಯವನ್ನು ಜಿಲ್ಲಾದಿಕಾರಿಯ ಮೂಲಕ ಪಂಚಾಯಿತಿನವರೆಗೆ ಅದೇಶ ಹೊರಡಿಸುವುದು.
7) ಅಕ್ರಮರನ್ನುಗುರುತಿಸಲು ವಿಶೇಷ ಪಂಚಾಯತ್ಮಟ್ಟದಲ್ಲಿ ಅಧಿಕಾರಿ ನೇಮಿಸುವುದು.
8) ನಿಮ್ಮಲೋಕಸಭಾ/ವಿಧಾನಸಭಾ ವ್ಯಾಪ್ತಿಯಲ್ಲಿರುವ ಅಕ್ರಮವಲಸಿಗರನ್ನು ಈ ಕೂಡಲೆ ಅವರವರ ದೇಶಕ್ಕೆ ಅಥವಾ ನಿಮ್ಮ ಕ್ಷೇತ್ರದಿಂದ ಹೊರ ಹೋಗುವಂತೆ ಅದೇಶ ಹೊರ ಡಿಸುವುದು.
9) ಇದನ್ನು ಅತ್ಯಂತ ಶೀಘ್ರವಾಗಿ ಮಾಡದೆ ಇದ್ದರೆ ಕಾರ್ಮಿಕರು,ಬಡ ದಿನಕೂಲಿ ಕಾರ್ಮಿಕರು ಮತ್ತು ಶ್ರಮಿಕರು ದಂಗೆಏದ್ದೇಳು ವಪರಿಸ್ಥಿತಿಗೆ ಬರಬಹುದು.ಇದಕ್ಕೆಲ್ಲಾ ನೀವೇಕಾರಣಿಕಾರ್ತರಾಗಬೇಕಾದೀತು.
10) ಈ ಸುಲಭದ ಕಾರ್ಯವನ್ನು ಮಾಡುವ ಮೂಲಕ ನಿಮ್ಮ ವ್ಯಾಪ್ತಿಯಲ್ಲಿ ಇಲ್ಲಿರುವ ಅಕ್ರಮ ವಲಸಿಗರಿಂದ ಬಡಕಾರ್ಮಿಕರಿಗೆ,ಕಟ್ಟಡ ಕಾರ್ಮಿಕರಿಗೆ, ಶ್ರಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ದೂರಗೊಳಿಸಲು ಈ ಮೂಲಕ ವಿನಂತಿ.
ಅಶೋಕ, ಇಳಂತಿಲ, ಸಾಮಾನ್ಯಮತದಾರ,
ಸ್ವಸ್ಥ ಭಾರತ- ಸೇವಾಶ್ರಮ, ಇಳಂತಿಲ ಗ್ರಾಮ.

Leave A Reply

Your email address will not be published.