ಶೌಚಾಲಯಕ್ಕೆ ತೆರಳಿದ ಬಾಲಕ‌ ನಿಗೂಢ ಕಣ್ಮರೆ | ಒಂದು ಸಣ್ಣ ಸುಳಿವು ಕೂಡ ಅಲಭ್ಯ !

Share the Article
ಪ್ರಜ್ವಲ್

ಸವಣೂರು: ಮನೆಯ ಶೌಚಾಲಯಕ್ಕೆ ತೆರಳಿದ ಬಾಲಕ ನಾಪತ್ತೆಯಾದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮಂಗಳವಾರ ನಡೆದಿದೆ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಕುಂಞ ಅವರ ಪುತ್ರ, ಪಾಲ್ತಾಡಿ ಗ್ರಾಮದ ಚೆನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ( 11) ನಾಪತ್ತೆಯಾದ ಬಾಲಕ.

ಬೆಳಗ್ಗೆ 7 ಗಂಟೆ ಹೊತ್ತಿಗೆ ತಾಯಿಯ ಬಳಿ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ. ತುಂಬಾ ಹೊತ್ತಾದರೂ ಬಾರದಿರುವ ಕಾರಣ ಮನೆ ಮಂದಿ ಹುಡುಕಾಟ ನಡೆಸಿದ್ದಾರೆ. ಆದರೆ ಆತ ಪತ್ತೆಯಾಗಿಲ್ಲ. ಈ ನಡುವೆ ಹೆತ್ತವರ ಆತಂಕ ಹೇಳತೀರದಾಗಿದೆ. ಬೆಳಗಿನಿಂದ ಇಷ್ಟು ಹೊತ್ತಾದರೂ, ಇನ್ನೂ ಒಂದು ಸಣ್ಣ ಸುಳಿವು ಕೂಡ ಲಭ್ಯವಾಗಿಲ್ಲ. ಮಗುವಿನ ನೆಂಟರ, ಗೆಳೆಯರ ಮನೆಗೆಲ್ಲ ಹುಡುಕಿಕೊಂಡು ತಂಡಗಳು ಸಾಗಿವೆ. ಇಲ್ಲಿಯತನಕ ಫಲಿತಾಂಶ ಶೂನ್ಯ.

ಈ ಬಾಲಕ ಎಲ್ಲಿಯಾದರೂ ಕಾಣ ಸಿಕ್ಕರೆ ಬೆಳ್ಳಾರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Leave A Reply

Your email address will not be published.