ಸವಣೂರು : ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

ಸವಣೂರು : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7ರಂದು ಆರಂಭಗೊಂಡಿದ್ದು ಫೆ.8ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಫೆ.6ರಂದು ಬೆಳಿಗ್ಗೆ ಊರ ಭಕ್ತಾಧಿಗಳಿಂದ ಸಮರ್ಪಣೆ ನಡೆಯಿತು.

 

ಫೆ.7ರಂದು ಬೆಳಿಗ್ಗೆ ತಂತ್ರಿಗಳ ಆಗಮನ,ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ,ಮಧ್ಯಾಹ್ನ ಕಲಶಾಭಿಷೇಕ,ಮಹಾಪೂಜೆ,ಪರಿವಾರ ದೇವರುಗಳ ಪ್ರತಿಷ್ಠಾ ದಿನದ ಪೂಜೆ,ಮಹಾಪೂಜೆ,ಪ್ರಸಾದ ವಿತರಣೆ,ಪಲ್ಲಪೂಜೆ ನಡೆಯಿತು.ಮದ್ಯಾಹ್ನ ಗೋಪಾಲಕೃಷ್ಣ ಬಡೆಕಿಲ್ಲಾಯ ಅವರ ಮನೆಯವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯಿತು.

ಸಂಜೆ ದೀಪಾರಾಧನೆ,ತಾಯಂಬಕ ಸೇವೆ,ಮಹಾಪೂಜೆ,ಶ್ರೀ ದೇವರ ಬಲಿಹೊರಟು ಉತ್ಸವ,ಶ್ರೀ ಭೂತಬಲಿ,ವಸಂತ ಕಟ್ಟೆಪೂಜೆ,ಸುಡುಮದ್ದು ಪ್ರದರ್ಶನ ನಡೆಯಿತು.

ವಸಂತ ಕಟ್ಟೆ ಪೂಜೆ

ಫೆ.8ರಂದು ಬೆಳಿಗ್ಗೆ ದರ್ಶನ ಬಲಿ,ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದ,ವೈಧಿಕ ಮಂತ್ರಾಕ್ಷತೆ ನಡೆಯಲಿದೆ.ಸವಣೂರು ಕೆ.ಸೀತಾರಾಮ ರೈ ಅವರ ಪುತ್ರ ಡಾ.ರಾಜೇಶ್ ರೈ ಸವಣೂರು ಅವರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ.

ಉಳ್ಳಾಲ್ತಿ ದೈವದ ನೇಮ(2019 ರ ಸಂಗ್ರಹ ಚಿತ್ರ)

ರಾತ್ರಿ ರಂಗಪೂಜೆ,ಉಳ್ಳಾಲ್ತಿ ದೈವಕ್ಕೆ ನೇಮೋತ್ಸವ,ಸವಣೂರು ಗುತ್ತು ಕುಟುಂಬಸ್ಥರ ಸೇವಾರ್ಥ ಅನ್ನಸಂತರ್ಪಣೆ ನಡೆಯಲಿದೆ.

Leave A Reply

Your email address will not be published.