ಭಜನಾ ಹೃದಯ ನಿರ್ಮಿಸುವ ಸಲುವಾಗಿ ಭಜನಾ ಸತ್ಸಂಗ ಸಮಾವೇಶ-ಡಾ.ಎಚ್.ಎಲ್. ಮಂಜುನಾಥ್


ಪುತ್ತೂರು : ಯುವಜನರಲ್ಲಿ ಧಾರ್ಮಿಕ ನಂಬಿಕೆ, ಆಚರಣೆಗಳ, ಧರ್ಮದ ಬಗ್ಗೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಭಜನಾ ಸತ್ಸಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್. ಎಲ್. ಮಂಜುನಾಥ್ ಹೇಳಿದರು.


ಅವರು ಫೆ. 8ರಂದು ಭಜನಾ ಸತ್ಸಂಗ ಸಮಾವೇಶ ನಡೆಯುವ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಗೆ ಭೇಟಿ ನೀಡಿ ಸಮಾವೇಶದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಯುವಶಕ್ತಿಯ ಸದ್ಭಳಕೆಗೆ ತಿಳುವಳಿಕೆ ಮೂಡಿಸುವ ಹಿನ್ನೆಲೆಯಲ್ಲಿ ಭಜನಾ ಕೂಟ ನಡೆಸಲಾಗುತ್ತಿದೆ , ಕಳೆದ 30 ವರ್ಷಗಳಿಂದ ಧರ್ಮಸ್ಥಳದಲ್ಲಿ ಭಜನಾ ಕಟ್ಟಡ, ಭಜನಾಕಮ್ಮಟ ನಡೆಯುತ್ತಿದೆ. ಕಟ್ಟಡ ನಿರ್ಮಾಣದ ಜೊತೆಗೆ ಭಜನಾ ಹೃದಯ ನಿರ್ಮಿಸುವ ಸಲುವಾಗಿ ಭಜನಾ ಸತ್ಸಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಭಜನಾ ಪರಿಷತ್ ನ್ನು ಬೆಳೆಸುವ ಉದ್ದೇಶವೂ ಈ ಸಮಾವೇಶದ ಹಿಂದೆ ಎಂದರು.

ಪುತ್ತೂರಿನ ಭಜನಾ ಸತ್ಸಂಗ ಸಮಾವೇಶದ ಮೂಲಕ ಭಜನೆಯ ಕುರಿತು ಹೊಸ ಹೊಳಪು ಮೂಡಿಸುವ ಪ್ರಯತ್ನ ನಡೆಯಲಿದೆ ಎಂದರು. ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಸತ್ಸಂಗ ಸಮಾವೇಶ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಆರ್ಥಿಕ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಪದ್ಮನಾಭ ಶೆಟ್ಟಿ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಉಪಸ್ಥಿತರಿದ್ದರು.