ಕಾಣಿಯೂರು ಹಾ.ಉ.ಸ.ಸಂಘದ ವತಿಯಿಂದ ಸಂವಾದ ಕಾರ್ಯಕ್ರಮ

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಜಾನುವಾರುಗಳಲ್ಲಿ ಪಶು ಆಹಾರ, ಲವಣ ಮಿಶ್ರಣ ಹಾಗೂ ಇತರ ಸ್ಥಳೀಯ ವಸ್ತುಗಳ ಸದ್ಬಳಕೆ ಬಗ್ಗೆ ಸಂವಾದ ಕಾರ್ಯಕ್ರಮವು ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಬೊಬ್ಬೆಕೇರಿ ಶಾಖಾ ಕಚೇರಿಯಲ್ಲಿ ನಡೆಯಿತು. ಹಿರಿಯ ವಿಜ್ಞಾನಿ ಡಾ|| ಶಿವಕುಮಾರ್ ಗೌಡ ಬೆಂಗಳೂರು ಮಾಹಿತಿ ನೀಡಿದರು. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ|| ಸತೀಶ್ ರಾವ್, ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ|| ಮಹೇಶ್ ಉಪಸ್ಥಿತರಿದ್ದರು. ಸಂಘದ ಕಾರ್ಯಾನಿರ್ವಾಹಣಾಧಿಕಾರಿ ಜಗದೀಶ್ ಗೌಡ ಸ್ವಾಗತಿಸಿದರು.

error: Content is protected !!
Scroll to Top
%d bloggers like this: