ಸೇವಾಭಾರತಿ ಕನ್ಯಾಡಿ : ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭ
ಮಂಗಳೂರು : ಸೇವಾಭಾರತಿ ಕನ್ಯಾಡಿ ಇದರ ಘಟಕ ‘ಸೇವಾಧಾಮ’ ನೇತೃತ್ವದಲ್ಲಿ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್, ಮಂಗಳೂರು, ಫಿಸಿಯೋಥೆರಪಿ ವಿಭಾಗ, ಇವರ ಸಹಕಾರದೊಂದಿಗೆ ರೋಟರಿ ಕ್ಲಬ್ ಆಫ್ ಮಂಗಳೂರು ಡೌನ್ಟೌನ್ ಹಾಗೂ ಎ. ಪಿ. ಡಿ ಸಂಸ್ಥೆ ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ ಸೇವಾಧಾಮ, ಸೌತಡ್ಕ ಇದರ ಆಶ್ರಯದಲ್ಲಿ ನಡೆದ 3 ದಿನಗಳ ವಸತಿ ಸಹಿತ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸಮಾರೋಪ ದಿ. 01 ಫೆಬ್ರವರಿ 2020 ರಂದು ನಡೆಯಿತು.
ಸಮಾರೋಪದ ಮುಖ್ಯ ಅತಿಥಿಯಾಗಿ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್, ಮಂಗಳೂರು ಇದರ ಚೀಫ್ ಆಪರೇಟಿಂಗ್ ಆಫೀಸರ್ ಡಾ. ಸುಹೈಬ್ ಖಾದರ್, ಸೇವಾಧಾಮದ ಸಂಚಾಲಕರಾದ ಕೆ. ಪುರಂದರ ರಾವ್, ಅಧ್ಯಕ್ಷತೆ ವಹಿಸಿದ್ದರು. ಡಾ. ಅನೂಪ್ ಜನರಲ್ ಮ್ಯಾನೇಜರ್ ಆಪರೇಷನ್, ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್, ಮಂಗಳೂರು, ಸೇವಾಧಾಮದ ನಿರ್ದೇಶಕರಾದ ರಾಯನ್ ಕಿರಣ್ ಫೆರ್ನಾಂಡಿಸ್, ಡಾ. ವೆಂಕಟೇಶ್ ಕುಂಪಲ, ವಿಭಾಗಾಧಿಕಾರಿ, ಡಿಪಾರ್ಟ್ಮೆಂಟ್ ಆಫ್ ಫಿಸಿಯೋಥೆರಫಿ, ಶ್ರೀಮತಿ ರೂಪಲಕ್ಷ್ಮಿ ಮ್ಯಾನೇಜರ್ ಆಫ್ DNA, ಬೆಂಗಳೂರು, ಎ ಪಿ ಡಿ ಬೆಂಗಳೂರಿನ ಫಿಸಿಯೋಥೆರಪಿಸ್ಟ್ ಪಾಲಯ್ಯ ಉಪಸ್ಥಿತರಿದ್ದರು.
ಶಿಬಿರದಲ್ಲಿ ಒಟ್ಟು 7 ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾದವರು ಭಾಗವಹಿಸಿದ್ದು, ಶಿಬಿರಾರ್ಥಿಗಳಿಗೆ ಉಚಿತ ಮೆಡಿಕಲ್ ಕಿಟ್ ವಿತರಿಸಲಾಯಿತು. ಓರ್ವ ಶಿಬಿರಾರ್ಥಿಗೆ ವಾಟರ್ ಬೆಡ್ ನೀಡಲಾಯಿತು.
ಸೇವಾಧಾಮದ ಕ್ಷೇತ್ರ ಸಂಯೋಜಕರಾದ ರೆಜಿನಾಲ್ಡ್ ಕ್ಲಿಪೋರ್ಡ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿ, ಸೇವಾಭಾರತಿಯ ಪ್ರಬಂಧಕರಾದ ಮೋಹನ್. ಎಸ್ ನಿಡ್ಲೆ ಸ್ವಾಗತಿಸಿ, ವಂದಿಸಿದರು.