ನೂತನ ತಾಲೂಕು ಕಡಬದಲ್ಲಿ ಪ್ರಥಮ ತಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆ

ಕಡಬ : ಫೆಬ್ರವರಿ ೨೮ ಮತ್ತು ೨೯ಂದು ರಾಮಕುಂಜದಲ್ಲಿ ನಡೆಯುವ ಕಡಬ ತಾಲ್ಲೂಕಿನ ೧ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅಚ್ಚು ಕಟ್ಟಾಗಿ ನಡೆಸಲು ಸ್ವಾಗತ ಸಮಿತಿ ಹಾಗೂ ಕಡಬ ತಾಲೂಕು ಕ.ಸಾ.ಪ ಭರದ ಸಿದ್ದತೆ ನಡೆಸಿದೆ.ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ.

ಈ ಕುರಿತ ನಡೆದ ಸಭೆಯಲ್ಲಿ ,ಸಾಹಿತ್ಯ ಸಮ್ಮೇಳನವು ಮಾದರಿಯಾಗಿ ಮತ್ತು ಅತ್ಯಂತ ಸಂಭ್ರಮದಿಂದ ಆಚರಿಸಲು ಸಹಭಾಗಿಗಳಾಗಬೇಕು ಎಂದು ಕಡಬ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಹೇಳಿದರು.

ಅವರು ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದಲ್ಲಿ ಸಾಹಿತ್ಯ ಪರಿಷತ್ ಸಮಿತಿ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಇಲ್ಲಿ ನಡೆಯುವ ಸಮ್ಮೇಳನ ಪೇಜಾವರ ಸ್ವಾಮೀಜಿಯವರಿಗೆ ಅರ್ಪಣೆಯಾಗಲಿದೆ, ಒಂದು ಒಳ್ಳೆಯ ಉದ್ದೇಶದೊಂದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಸ್ವಾಗತ ಸಮಿತಿಗೆ ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದರು.

ಪುತ್ತೂರು ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಮಾತನಾಡಿ ಪುತ್ತೂರು ತಾಲ್ಲೂಕಿನೊಂದಿಗೆ ಇದ್ದ ಕಡಬ ಇದೀಗ ತಾಲ್ಲೂಕು ಆಗಿದೆ, ಹೊಸ ತಾಲ್ಲೂಕು ಘಟಕ ಪ್ರತ್ಯೇಕವಾಗಿದೆ, ಈ ಹಿಂದೆ ಪುತ್ತೂರು ತಾಲ್ಲೂಕು ಮತ್ತು ಸುಳ್ಯ ತಾಲ್ಲೂಕು ಘಟಕದಲ್ಲಿ ಇದ್ದಂತಹ ಸದಸ್ಯರು ಈಗ ಕಡಬ ತಾಲ್ಲೂಕು ಘಟಕದಲ್ಲಿ ಗುರುತಿಸಿಕೊಂಡಿದ್ದಾರೆ, ಅವರೆಲ್ಲರನ್ನೂ ಸೇರಿಸಿಕೊಂಡು ಸಮ್ಮೇಳನ ಯಶಸ್ವಿ ಆಗಲು ನಾವೆಲ್ಲ ಸಹಕಾರಿಗಳಾಗಬೇಕು ಎಂದರು.

ಸಭೆ ನಡೆಯಿತು

ಸ್ವಾಗತ ಸಮಿತಿ ಖಜಾಂಚಿ ಶೇಷಪ್ಪ ರೈ ಮಾತನಾಡಿ ಸಮ್ಮೇಳನವನ್ನು ೨ ದಿವಸ ನಡೆಸಲು ತೀರ್ಮಾನಿಸಲಾಗಿದೆ, ಒಟ್ಟು ೫ ಲಕ್ಷ ರೂಪಾಯಿಯ ಬಜೆಟ್ ಹಾಕಿಕೊಳ್ಳಲಾಗಿದೆ, ಈಗಾಗಲೇ ಹಲವು ದಾನಿಗಳನ್ನು ಸಂಪರ್ಕಿಸಲಾಗಿದೆ, ಸ್ವಾಮೀಜಿಯವರ ಹೆಸರಿನಲ್ಲಿ ನಡೆಯುವ ಸಮ್ಮೇಳನಕ್ಕೆ ಆರ್ಥಿಕ ಸಮಸ್ಯೆ ಎದುರಾಗಲಾರದು ಎಂಬ ನಂಬಿಕೆ ಇದೆ, ಆದರೂ ಎಲ್ಲರೂ ತಮ್ಮಿಂದ ಆಗುವ ಸಹಾಯ ಸಹಕಾರವನ್ನು ನೀಡಬೇಕಾಗಿದೆ ಎಂದರು.

ಟಿ.ನಾರಾಯಣ ಭಟ್ ,ಸಮ್ಮೇಳನಾಧ್ಯಕ್ಷರು

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಭಟ್ ಮತ್ತು ಕಾರ್ಯದರ್ಶಿ ಗಣರಾಜ ಕುಂಬ್ಲೆ ಸಮ್ಮೇಳನದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಸಮ್ಮೇಳನ ಅಧ್ಯಕ್ಷ ನಾರಾಯಣ ಭಟ್ ಟಿ., ಸಂಚಾಲಕರಾದ ವೇದವ್ಯಾಸ ರಾಮಕುಂಜ, ಸಹ ಸಂಚಾಲಕ ಸಂಕೀರ್ತ್ ಹೆಬ್ಬಾರ್, ಉಪಾಧ್ಯಕ್ಷ ವಿಠಲ ರೈ ಆಲಂಕಾರು, ಗೌರವ ಸಲಹೆಗಾರರಾದ ಡಾ. ಶ್ರೀಧರ್ ಹೆಚ್.ಜಿ., ಕಡಬ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ ಎನ್.ಕೆ. ನಾಗರಾಜ್, ದ.ಕ. ಜಿಲ್ಲಾ ಕಾರ್ಯ‍ನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಿದ್ದಿಕ್ ನೀರಾಜೆ, ಸಮ್ಮೇಳನ ಸ್ವಾಗತ ಸಮಿತಿಯ ರವೀಂದ್ರ ಟಿ., ದಿವಾಕರ ರಾವ್, ಶಿವರಾಮ ಗೌಡ ಕಡಬ, ಪೀರ್ ಮಹಮ್ಮದ್ ಸಾಹೇಬ್, ವಿವಿಧ ಉಪ ಸಮಿತಿಗಳ ಸದಸ್ಯರುಗಳು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

Leave A Reply

Your email address will not be published.