ಭಕ್ತಕೋಡಿ : ಜಿ.ಪಂ.ಅಧ್ಯಕ್ಷರಿಂದ ಕಾಮಗಾರಿಗೆ ಗುದ್ದಲಿಪೂಜೆ

ಪುತ್ತೂರು : ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅನುದಾನದಲ್ಲಿ ಬಿಡುಗಡೆಯಾದ 4.20 ಲಕ್ಷ ವೆಚ್ಚದ ಭಕ್ತಕೋಡಿ ಪಾಲೆತ್ತಗುರಿ ಕಾಂಕ್ರೀಟ್ ರಸ್ತೆ ಮತ್ತು 2.50 ಲಕ್ಷ ವೆಚ್ಚದ ಭಕ್ತಕೋಡಿ ಗೋ ಆಸ್ಪತ್ರೆಯ ಆವರಣ ಗೋಡೆಯ ಕಾಮಗಾರಿಗಾಗಿ ಗುದ್ದಲಿ ಪೂಜೆಯನ್ನು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೆರವೇರಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕರುಣಾಕರ ಎಲಿಯ ಮಾತನಾಡಿ ಜಿಲ್ಲಾಪಂಚಯತ್ ಅಧ್ಯಕ್ಷರು ಕಳೆದ ಮೂರು ವರ್ಷಗಳಲ್ಲಿ 1 ಕೋಟಿಗೂ ಅಧಿಕ ಅನುದಾನವನ್ನು ಸರ್ವೆ ಗ್ರಾಮಕ್ಕೆ ನೀಡಿದನ್ನು ನೆನಪಿಸಿದರು.. ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಧಶಿವ ಭಂಡಾರಿ,ಬಿಜೆಪಿ ಸರ್ವೆ ಬೂತ್ ಅಧ್ಯಕ್ಷ ಗೌತಮ್ ರೈ ಸರ್ವೆ, ಕಾರ್ಯದರ್ಶಿ ಗಣೇಶ್ ಭಕ್ತಕೋಡಿ, ಹಿಂ.ಜಾ. ವೇ. ಗೌರವಾಧ್ಯಕ್ಷ ಬೆಳಿಯಪ್ಪ ಗೌಡ ಸರ್ವೆ,ಅಧ್ಯಕ್ಷ ಯೋಗೀಶ್ ಟಿ.ಸರ್ವೆ,ವಿನಯ್ ಕುಮಾರ್ ರೈ ಸರ್ವೆ,ಪದ್ಮನಾಭ ಸರ್ವೆ,ನವೀನ್ ರೈ ಸರ್ವೆ,ಜನಾರ್ದನ ಸರ್ವೆ,ಧನಂಜಯ ಸರ್ವೆ,ದಿನೇಶ್,ಕಿರಣ್,ಸಂದೀಪ್ ಜೊತೆಗಿದ್ದರು ಹಿಂ.ಜಾ ವೇ ಪ್ರ. ಕಾರ್ಯದರ್ಶಿ ಸ್ವಸ್ತಿಕ್ ಮೆಗಿನಗುತ್ತು ಕಾರ್ಯಕ್ರಮ ನಿರೂಪಿಸಿದರು

Leave A Reply

Your email address will not be published.